ಭಯೋತ್ಪಾದನೆಯನ್ನು ತೊಡೆದುಹಾಕಲು ನಾನು ಬಯಸಿದರೆ ವಿರೋಧಿಗಳು ನನ್ನನ್ನೇ ಮುಗಿಸಲು ಯೋಜಿಸಿದ್ದಾರೆ: ಪ್ರಧಾನಿ ಮೋದಿ
0
ಮಾರ್ಚ್ 03, 2019
ಪಾಟ್ನಾ: ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಬಯಸುತ್ತೇನೆ ಆದರೆ ವಿವಿರೋಧಿಗಳು ನನ್ನನ್ನು ಮುಗಿಸಲು ಹೊಂಚು ಹಾಕುತ್ತಿವೆ. ಭಯೋತ್ಪಾದಕ ತರಬೇತಿ ಶಿಬಿರದ ಮೇಲಿನ ವಾಯುದಾಳಿ ಬಳಿಕವೂ ಕಾಂಗ್ರೆಸ್ ಮತ್ತಿತರೆ ಪಕ್ಷಗಳವರು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬಿಹಾರದ ಪಾಟ್ನಾದಲ್ಲಿ ನ್ಯಾಷನಲ್ ಡೆಮೋಕ್ರಾಟಿಕ್ ಅಲೆಯನ್ಸ್ (ಎನ್ ಡಿಎ) ರ್ಯಾಲಿಯನ್ನು ಭಾನುವಾರ ಉದ್ದೇಶಿಸಿ ಅವರು ಮಾತನಾಡಿದರು.
ವಿರೋಧ ಪಕ್ಷಗಳು ಮೊನ್ನೆ ನಡೆದ ಏರ್ ಸ್ಟ್ರೈಕ್ ನ ಪುರಾವೆಗಳನ್ನು ಕೇಳುತ್ತಿವೆ, ಭಾರತೀಯ ಸೇನೆಯಲ್ಲಿನ ಸೈನಿಕರ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಶತ್ರುರಾಷ್ಟ್ರಗಳ ಬಲ ಹೆಚ್ಚುವಂತೆ ಮಾಡಲು ಹೊರಟಿದ್ದಾರೆಯೆ?ಎಂದು ಮೋದಿ ಪ್ರಶ್ನಿಸಿದ್ದಾರೆ.
ಭಾರತೀಯರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ನಮ್ಮ ಯೋಧರಿಗೆ ಸಲಾಂ ಎನ್ನುತ್ತಿರುವಾಗ 21 ವಿರೋಧ ಪಕ್ಷಗಳ ನಾಯಕರು ಅದನ್ನು ಖಂಡಿಸಿ ನಿರ್ಣಯ ಕೈಗೊಳ್ಳಲು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಪುಲ್ವಾಮಾ ದಾಳಿಯ ಬಳಿಕ 'ಇಡೀ ರಾಷ್ಟ್ರ ಸೈನಿಕರ ಕುಟುಂಬದೊಡನೆ ಇದೆ' ಎಂದ ಮೋದಿ ಮೊನ್ನೆ ನಡೆಅ ವಾಯುದಾಳಿಯನ್ನು ಪ್ರಶಂಸಿಸಿ ಇದು ನವ ಭಾರತ, ನಾವೀಗ ನಮ್ಮ ಸೈನಿಕರ ಹತ್ಯೆಯಾದರೂ ಸುಮ್ಮನೆ ಕೈಕಟ್ಟಿ ಕೂರಲಾರೆವು ಎಂದು ಗುಡುಗಿದರು.
ಪಾಟ್ನಾದ ರ್ಯಾಲಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಹ ಭಾಗವಹಿಸಿದ್ದರು. ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಮೋದಿ ಜತೆಗೂಡಿ ಪ್ರಶಂಸನೀಯ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿಗಳು ಪ್ರಶಂಸಿಸಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟ ಅತಿ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.