HEALTH TIPS

ಲೋಕಸಭೆ ಚುನಾವಣೆ: ಹಿಮಾಚಲ ಪ್ರದೇಶದ ತಶಿಗಂಗ್ ಜಗತ್ತಿನ ಅತಿ ಎತ್ತರದ ಮತಗಟ್ಟೆ

ಚಂಡೀಗಢ: 2019ರ ಲೋಕಸಭೆ ಚುನಾವಣೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದ್ದು, ಜಗತ್ತಿನ ಅತಿ ಎತ್ತರದ ಮತಗಟ್ಟೆ ಹಿಮಾಚಲ ಪ್ರದೇಶದ ಬೌದ್ಧ ಪ್ರಾಬಲ್ಯದ ಲಾಹೌಲ್ ಸ್ಪಿತಿ ಜಿಲ್ಲೆಯ ತಶಿಗಂಗ್ ನಲ್ಲಿದೆ. ಈ ಮತಗಟ್ಟೆ ಒಟ್ಟು 15,256 ಅಡಿ ಎತ್ತರದಲ್ಗಿದ್ದು, ದೇಶದ ಎರಡನೇ ಅತಿ ದೊಡ್ಡ ಕ್ಷೇತ್ರವಾದ ಮಂಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17 ಲೋಕಸಭಾ ಕ್ಷೇತ್ರಗಳಿವೆ. ಭಾರತ-ಚೀನಾ ಗಡಿಯಿಂದ 29 ಕಿ.ಮೀ.ದೂರದಲ್ಲಿರುವ ತಶಿಗಂಗ್ ಮತ್ತು ಗೆಟೆ ಎರಡು ಗ್ರಾಮಗಳನ್ನು ಸೇರಿ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಪರಿಷ್ಕೃತ ಚುನಾವಣಾ ಪಟ್ಟಿಯ ಪ್ರಕಾರ, ಈ ಎರಡು ಗ್ರಾಮಗಳಲ್ಲಿ 48 ಮತದಾರರಿದ್ದು, 30 ಪುರುಷರು ಹಾಗೂ 18 ಮಹಿಳಾ ಮತದಾರರಿದ್ದಾರೆ. 78 ವರ್ಷದ ರಿಗ್ಜಿನಿ ತಶಿಗಂಗ್ ಮತಗಟ್ಟೆಯ ಅತ್ಯಂತ ಹಿರಿಯ ಮತದಾರೆಯಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries