ಜಿಲ್ಲೆಯ ಮೊದಲ ಮಾವೇಲಿ ಸೂಪರ್ ಸ್ಟೋರ್ ಉದ್ಘಾಟನೆ
0
ಮಾರ್ಚ್ 02, 2019
ಕಾಸರಗೋಡು: ಜಿಲ್ಲೆಯ ಮೊದಲ ಮಾವೇಲಿ ಸೂಪರ್ ಸ್ಟೋರ್ ಕೋಡೋಂ-ಬೇಳೂರು ಗ್ರಾಮಪಂಚಾಯತ್ ನ ಕಾಲಿಚ್ಚಾನಡ್ಕದಲ್ಲಿ ಆರಂಭಗೊಂಡಿದೆ.
ಸಪ್ಲೈಕೋ ವತಿಯಿಂದ ನಡೆಸಲಾಗುವ ಈ ಸೂಪರ್ ಸ್ಟೋರನ್ನು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. 16 ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ, ಇತರ ಸಾಮಾಗ್ರಿಗಳು ಶೇ 3ರಿಂದ ಶೇ 5 ವರೆಗೆ ಬೆಲೆಕಡಿತದಲ್ಲಿ ಲಭಿಸುತ್ತಿರುವ ಮಾವೇಲಿ ಸ್ಟೋರ್ ಗಳು ಜನತೆಗೆ ಉಪಯುಕ್ತವಾಗಿವೆ ಎಂದು ಸಚಿವ ಈ ವೇಳೆ ತಿಳಿಸಿದರು.
ಕಳೆದ ಚುನಾವಣೆ ವೇಳೆ ಜನತೆಗೆ ನೀಡಿದ ದ ಭರವಸೆಗಳನ್ನು ಈಡೇರಿಸಿ, ಜನತೆಗೆ ಸಂತೃಪ್ತಿ ಒದಗಿಸುವ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಿದ ಫಲ ಎಲ್ಲರಿಗೂ ಲಭಿಸಿದೆ ಎಂದವರು ನುಡಿದರು.
4 ಶಟರ್ ಗಳಿರುವ ವಿಶಾಲವಾದ ಈ ಅಂಗಡಿಯಲ್ಲಿ ಸಾರ್ವಜನಿಕರು ಸ್ವಯಂ ಸಾಮಾಗ್ರಿ ಆಯ್ಕೆ ಮಾಡಿಕೊಳ್ಳಬಹುದಾದ ರೀತಿ ಪೆಕೆಟ್ ಮಾಡಲಾದ ಸಾಮಾಗ್ರಿಗಳು ಲಭಿಸುತ್ತಿವೆ. ಎರಡು ಶಟರ್ ಇರುವ ವಿಭಾಗದಲ್ಲಿ ಶಬರಿ ಸಂಸ್ಥೆಯ ಉತ್ಪನ್ನಗಳು, ಉಳಿದ ಎರಡು ಶಟರ್ ಇರುವ ವಿಭಾಗದಲ್ಲಿ ಇತರ ಸಾಮಾಗ್ರಿಗಳು ಇವೆ.
ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಕುಂಞÂಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲೋಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್ ಮೊದಲ ಮರಾಟ ನಡೆಸಿದರು. ಸಪ್ಲೈ ಕೋ ರೀಜನಲ್ ಮೆನೆಜರ್ ಎನ್.ರಘುನಾಥ್, ಜಿಲ್ಲಾ ಸಪ್ಲೈ ಕೋ ಆಫೀಸರ್ ರಷೀದ್ ಮುತ್ತುಕಂಡಿ, ಬ್ಲೋಕ್ ಪಂಚಾಯತ್ ಉಪಾಧಯಕ್ಷೆ ಪಿ.ವಿ.ತಂಗಮಣಿ, ಗ್ರಾಮಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಬೂಪೇಷ್, ಪಿ.ವಿ.ಉಷಾ, ಸದಸ್ಯರಾದ ಎಂ.ಅನೀಷ್ ಕುಮಾರ್, ಎಂ.ಮುಸ್ತಫಾ, ಎಂ.ಪುಷ್ಪಾ, ಕೆ.ಲತಾ, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.