ಪಡೆದ ಶಿಕ್ಷಣ ಸಮಾಜದ ಉಪಕಾರಕ್ಕೆ ಬಳಕೆಯಾದಾಗ ಸಾರ್ಥಕ : ರಾಜ್ಯಪಾಲ ಪಿ.ಸದಾಶಿವಂ
ಕಾಸರಗೋಡು: ಪಡೆದ ಶಿಕ್ಷಣ ಸಮಾಜದ ಉಪಕಾರಕ್ಕೆ ಬಳಕೆಯಾದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ರಾಜ್ಯಪಾಲ ,ನಿವೃತ್ತ ನ್ಯಾಯಮೂರ್ತಿ ಪಿ.ಸದಾಶಿವಂ ಅಭಿಪ್ರಾಯಪಟ್ಟರು.
ಪೆರಿಯ ಕೇರಳ ಕೇಂದ್ರ ವಿವಿಯಲ್ಲಿ ಶನಿವಾರ ನಡೆದ ತೃತೀಯ ಹಂತದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದವಿ ಪಡೆದಲ್ಲಿಗೆ ಶಿಕ್ಷಣ ಮುಗಿಯುವುದಿಲ್ಲ. ಪದವಿ ಪಡೆಯುವುದು ಶಿಕ್ಷಣ ರಂಗದ ಒಂದು ಮೈಲುಗಲ್ಲು ಮಾತ್ರ. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿ, ಡಾಟಾಬೇಸ್ ಗಳಲ್ಲಿ ಸೀಮಿತರಾಗದೆ ಸಮಾಜವನ್ನುಕಣ್ತೆರೆದು ನೋಡುವಂತೆ, ಅರ್ಥಮಾಡಿಕೊಳ್ಳವಂತಾಗಬೇಕು ಎಂದವರು ಆಗ್ರಹಿಸಿದರು.
ದೇಶದ ಸಂವಿಧಾನದ ಪ್ರಸ್ತಾವನೆ ಮತ್ತು ಪೌರನ ಮೂಲಭೂತ ಕರ್ತವ್ಯಗಳು ಶಿಕ್ಷಣಾಲಯಗಳಲ್ಲಿ ಕೈಹೊತ್ತಗೆ ರೂಪದಲ್ಲಿ ಸಿಗುವಂತಾಗಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವದಿಂದ ಕಾಣುವ ಮನೋಧರ್ಮ ಬೆಳೆಯಬೇಕು. ಮಹಿಳೆಯರನ್ನು,ಮಕ್ಕಳನ್ನು , ಪ್ರಕೃತಿಯನ್ನು ಸಂರಕ್ಷಿಸುವಲ್ಲಿ, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಖಚಿತಪಡಿಸುವಲ್ಲಿ ಸಂವಿಧಾನ ನಮಗೆ ಪ್ರೇರಣೆಯಾಗಿದೆ. ಈ ಕುರಿತು ಸ್ವಯಂಸೇವಾ ಸಂಘಟನೆಗಳು ಮುಂದೆ ಬರಬೇಕು ಎಂದು ರಾಜ್ಯಪಾಲ ತಿಳಿಸಿದರು.
ಉನ್ನತ ಶಿಕ್ಷಣ ರಂಗದ ಗುಣಮಟ್ಟ ಕಡಿಮೆಯಾಗಿರುವುದನ್ನು ಮನಗಂಡು ರಾಜ್ಯದ ಅತ್ಯುತ್ತಮ ವಿವಿಗಿರುವ ಚಾಂಸಿಲರ್ ಪುರಸ್ಕಾರ ಏರ್ಪಡಿಸಲಾಗಿದೆ. ಒಂದು ಕೋಟಿ ರೂ. ಹೊಂದಿರುವ ಈ ಪುರಸ್ಕಾರ ಈ ಬಾರಿ ಕೋಟಯಂ ಮಹಾತ್ಮಾಗಾಂಧಿ ವಿವಿಗೆ ಮತ್ತು ವಯನಾಡ್ ವೆಟರ್ನರಿ ವಿವಿಗಳಿಗೆ ಲಭಿಸಿದೆ ಎಂದವರು ಹೇಳಿದರು.
ಕೇರಳ-ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ವಿ.ಶೇಷಗಿರಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಗುಜರಾತ್ ಕೇಂದ್ರ ವಿವಿ ಉಪಕುಲಪತಿ ಪ್ರೊ.ಎಸ್.ಎ.ಬಾರಿ, ಉಪಕುಲಪತಿ ಕೆ.ಜಯಪ್ರಸಾದ್, ಪರೀಕ್ಷಾ ನಿಯಂತ್ರಣಾಧಿಕಾರಿ ಮುರಳೀಧರನ್ ಮೊದಲಾದವರು ಉಪಸ್ಥಿತರಿದ್ದರು.
ಕೇರಳ-ಕೇಂದ್ರ ವಿವಿ ಉಪಕುಲಪತಿ ಡಾ.ಜಿ.ಗೋಪಕುಮಾರ್ ಸ್ವಾಗತಿಸಿ,ರಿಜಿಸ್ತ್ರಾರ್ ಎ.ರಾಧಾಕೃಷ್ಣನ್ ನಾಯರ್ ವಂದಿಸಿದರು. ವಿವಿಧ ವಿಭಾಗಗಳ 790 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಡೆಯಿತು.
ರಾಜ್ಯಪಾಲರಿಂದ ಕೇರಳ-ಕೇಂದ್ರ ವಿವಿ ಪದವಿ ಪ್ರದಾನ
0
ಮಾರ್ಚ್ 02, 2019