HEALTH TIPS

ಕೇರಳ ಸರಕಾರದಲ್ಲಿಲ್ಲ ಜಲ ಸಂಪತ್ತಿನ ಲೆಕ್ಕ!

ಬದಿಯಡ್ಕ: ರಾಜ್ಯದ ಜಲ ಸಂಪತ್ತಿನ ಕುರಿತು ಸರಕಾರದ ಬಳಿ ಸ್ಪಷ್ಟವಾದ ಲೆಕ್ಕವಿಲ್ಲ. ಅಂತರ್‍ರಾಜ್ಯ ನದಿಜಲ ಸಮಸ್ಯೆಗಳು ನಿರಂತರ ಕೋರ್ಟ್ ವ್ಯವಹಾರಗಳಾಗುತ್ತಿವೆ. ಕೆಲವೊಮ್ಮೆ ಕೇರಳ ನೀರು ಕುಡಿಯಬೇಕಾದ ಪರಿಸ್ಥಿತಿ ನೆಲೆ ನಿಂತಿದೆ. ನೀರಿನ ವಿನಿಯೋಗ ಕುರಿತು ಜಲ ಸಂಪನ್ಮೂಲ ಇಲಾಖೆ ಹಾಗೂ ಕೆಎಸ್‍ಇಬಿ ಮಂಡಳಿ(ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್) ನಡುವೆ ಹಲವಾರು ವಿವಾದಗಳು ತಲೆದೋರಿವೆ. 1997-99ರಲ್ಲಿ ಕೇರಳದ ಜಲಸಂಪತ್ತಿನ ಕುರಿತು ಸಿಡಬ್ಲ್ಯೂಆರ್‍ಡಿಎಂ(ಸೆಂಟರ್ ಫಾರ್ ವಾಟರ್ ರಿಸೋರ್ಸ್ ಡೆವೆಲಪ್‍ಮೆಂಟ್ ಆಂಡ್ ಮ್ಯಾನೇಜ್ಮೆಂಟ್) ಅಧ್ಯಯನ ನಡೆಸಿತ್ತು. ಪ್ರತಿ ಜಲಸಂಪನ್ಮೂಲದಲ್ಲಿ, ಪ್ರತಿ ಹವಾಮಾನದಲ್ಲಿ ನೀರಿನ ಲಭ್ಯತೆ ಪರಿಗಣಿಸಿ ವರದಿ ತಯಾರಿಸಲಾಗಿತ್ತು. ಮನೆ, ಜಾನುವಾರುಗಳ ಉಪಯೋಗ, ಕೃಷಿ, ಕೈಗಾರಿಕಾ ಉಪಯೋಗ ಇತ್ಯಾದಿ ವರದಿಯಲ್ಲಿ ವಿಮರ್ಶಿಸಲಾಗಿತ್ತು. ಸಿಡಬ್ಲ್ಯೂಆರ್‍ಡಿಎಂ ಜಲ ವಿಭಾಗ ಮುಖ್ಯಸ್ಥರಾಗಿದ್ದ ಡಾ. ಇ. ಜೆ, ಜೇಮ್ಸ್ ನೇತೃತ್ವದಲ್ಲಿ ವಿಜ್ಞಾನಿಗಳಾದ ಡಾ. ಎ. ಬಿ. ಅನಿತಾ, ಡಾ. ಕೆ. ಇ. ಶ್ರೀಧರನ್, ಡಾ. ಪಿ. ಎಸ್. ಹರಿಕುಮಾರ್, ಡಾ. ಎಂ. ಆರ್. ವೇಣುಗೋಪಾಲ್ ವರದಿ ತಯಾರಿಸಿದ್ದಾರೆ. ಒಟ್ಟು ನೀರಿನ ಲಭ್ಯತೆಯ ವಿವರಗಳು ಈ ವರದಿಯಲ್ಲಿ ಅಪೂರ್ಣವಾಗಿದೆ ಎಂದು ಅಂದೇ ಮೌಲ್ಯಮಾಪನ ನಡೆಸಲಾಗಿತ್ತು. ಜೊತೆಗೆ ಜಲಸಂಪತ್ತಿನ ರಚನೆಯಲ್ಲಿನ ಗಂಭೀರವಾದ ಬದಲಾವಣೆ ಉಂಟಾಗಿದೆ. ಮಳೆಯ ಅಳತೆಯಲ್ಲಿ ಉಂಟಾದ ದೊಡ್ಡ ಬದಲಾವಣೆ ಜಲಸಂಪತ್ತನ್ನು ಬಾಧಿಸಿದೆ. ಜಲ ಸಂಪತ್ತು ಕುರಿತು ಜಲ ಸಂಪನ್ಮೂಲ ಇಲಾಖೆಯ ಗಣತಿ ಅರ್ಧದಲ್ಲಿ ಸ್ಥಗಿತಗೊಂಡಿದೆ. ರಾಜ್ಯದ 44 ನದಿಗಳು, ಅವುಗಳ ಪೋಷಕ ನದಿಗಳು, ಭಾರತದ ಅತಿ ದೊಡ್ಡ ಜಲಾಶಯ ಕೇಂದ್ರ ವೇಂಬನಾಟ್ಟು ಕಾಯಲ್, ಅಷ್ಟಮುಡಿಕ್ಕಾಯಲ್, ಅಣೆಕಟ್ಟುಗಳು, ಜಲಾಶಯಗಳು, ದೊಡ್ಡ ಕೆರೆಗಳು, ದೊಡ್ಡ ತೋಡುಗಳು ಇತ್ಯಾದಿ ನೀರಿನ ಒಟ್ಟು ಲೆಕ್ಕ ಸಂಗ್ರಹಿಸಲು ಜಲಸಂಪನ್ಮೂಲ ಇಲಾಖೆ 2 ವರ್ಷಗಳ ಹಿಂದೆ ಕ್ರಮ ಆರಂಭಿಸಿತ್ತು. ನ್ಯಾಷನಲ್ ರಿಮೊಟ್ ಸೆನ್ಸಿಂಗ್ ಸ್ಯಾಟ್‍ಲೈಟ್ ಸಹಾಯದೊಂದಿಗೆ ಲೆಕ್ಕಾಚಾರ ನಡೆಸಲು ತೀರ್ಮಾನಿಸಲಾಗಿದೆ. ದೆಹಲಿ ಐಐಟಿ, ಪುಣೆ ರಾಷ್ಟ್ರೀಯ ಜಲ ಅಕಾಡೆಮಿ ಏಜೆನ್ಸಿಗೆ, ಅಧಿಕಾರಿಗಳಿಗೆ ಲೆಕ್ಕ ಸಂಗ್ರಹಣೆಯಲ್ಲಿ ಪ್ರಾಥಮಿಕ ತರಬೇತಿ ನೀಡಲಾಗಿದೆ. ಸುಪ್ರೀಂ ಕೋರ್ಟ್‍ನ ಪರಿಗಣನೆಯಲ್ಲಿರುವುದರಿಂದ ಮುಲ್ಲಪೆರಿಯರ್, ಕಾವೇರಿ ನದಿಗಳನ್ನು ಲೆಕ್ಕಾಚಾರದಲ್ಲಿ ಸೇರ್ಪಡಿಸಿಲ್ಲ. ಏಕೆಂದರೆ, ಕಾವೇರಿಯ ಪೋಷಕ ನದಿಯಾಗಿದೆ ಕೇರಳದ ಮೂಲಕ ದಕ್ಷಿಣಕ್ಕೆ ಹರಿಯುವಂತಹ ಪಾಂಬಾರ್ ನದಿ. ಪರಂಬಿಕ್ಕುಳಂ-ಆಳಿಯಾರ್ ಅಣೆಕಟ್ಟುಗಳನ್ನು ಲೆಕ್ಕಾಚಾರದಲ್ಲಿ ಸೇರ್ಪಡಿಸಲು ತೀರ್ಮಾನಿಸಲಾಗಿದೆ. ಜಲ ಲಭ್ಯತೆ ಹಾಗೂ ಉಪಯೋಗವನ್ನು ಪರಿಗಣಿಸುವಾಗ ಕೇರಳಕ್ಕೆ ಅಗತ್ಯವಾದ ನೀರು ನದಿಗಳಲ್ಲಿ ಇಲ್ಲ ಎಂದು ಪಂಪ, ಅಚ್ಚನ್‍ಕ್ಕೋವಿಲ್, ಮೂವಾಟ್ಟುಪ್ಪುಯ, ಮೀನಚ್ಚಿಲ್, ಮಣಿಮಲೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಪತ್ತೆ ಹಚ್ಚಲಾಗಿದೆ. ನೀರಿನ ಉಪಯೋಗದ ಕುರಿತು ಜಲ ಇಲಾಖೆ ಹಾಗೂ ವಿದ್ಯುತ್ ಮಂಡಳಿಯಲ್ಲಿ ಪರಸ್ಪರ ನೆಲೆ ನಿಂತಿರುವ ಕೆಲವು ವಾದವಿವಾದಗಳಿಗೆ ಪರಿಹಾರ ಕಲ್ಪಿಸಲು ಲೆಕ್ಕಾಚಾರ ಅನಿವಾರ್ಯವಾಗಿದೆ. ಕೇಂದ್ರ ಸರಕಾರದ ಪರಿಗಣನೆಯಲ್ಲಿದ್ದ ನದಿ ಸಂಯೋಜನ ಯೋಜನೆ ಜಾರಿಗೊಳಿಸಬೇಕಾದರೆ ಜಲಸಂಪತ್ತಿನ ಲೆಕ್ಕಾಚಾರ ಅನಿವಾರ್ಯವಾಗಿದೆ. ಲೆಕ್ಕಾಚಾರದ ಆವಶ್ಯಕತೆಯ ಕುರಿತ ಸಮಗ್ರ ವರದಿಯನ್ನು ಸಿಡಬ್ಲ್ಯೂಆರ್‍ಡಿಎಂ ಸರಕಾರಕ್ಕೆ ಸಲ್ಲಿಸಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries