ಏತಡ್ಕ-ವಿದಾಯಕೂಟ
0
ಮಾರ್ಚ್ 29, 2019
ಬದಿಯಡ್ಕ: ಏತಡ್ಕದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ಕಾಲದ ಅಧ್ಯಾಪನ ವೃತ್ತಿಯಿಂದ ನಿವೃತ್ತರಾಗುತ್ತಿರುವ ಮುಖ್ಯೋಪಾಧ್ಯಾಯಿನಿ ಸರೋಜ ಪಿ ಮತ್ತು ಅಧ್ಯಾಪಿಕೆ ಸರೋಜ ಎನ್.ಕೆ ಅವರಿಗೆ ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ವತಿಯಿಂದ ವಿದಾಯಕೂಟ ಇತ್ತೀಚೆಗೆ ಏರ್ಪಡಿಸಲಾಯಿತು.ಅವರಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಉಪಾಧ್ಯಕ್ಷ ವೈ.ಕೆ ಗಣಪತಿ ಭಟ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ವೈ.ವಿ ಸುಬ್ರಹ್ಮಣ್ಯ ಅಭಿನಂದನ ಭಾಷಣ ಮಾಡಿ ಅವರ ಸೇವೆ, ಸಹಕಾರಗಳನ್ನು ಸ್ಮರಿಸಿದರು. ಗೌರವ ಸ್ವೀಕರಿಸಿದ ಅಧ್ಯಾಪಿಕೆಯರು ಮಾತನಾಡಿ ತಮ್ಮ ಮತ್ತು ಗ್ರಂಥಾಲಯದ ಆತ್ಮೀಯ ಸಂಬಂಧವನ್ನು ಮೆಲುಕು ಹಾಕಿ ಕೃತಜ್ಞತೆ ಸಲ್ಲಿಸಿದರು.
ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯರಾದ ರಾಜಲಕ್ಷ್ಮಿ, ಅರ್ಚನಾ, ಖೈರುನ್ನೀಸ ಪ್ರಾರ್ಥನೆ ಹಾಡಿದರು.ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಡಾ.ವೇಣುಗೋಪಾಲ್ ಕಳೆಯತ್ತೋಡಿ ವಂದಿಸಿದರು. ಸಮಿತಿ ಸದಸ್ಯ ಸುಧೀರ್ ಕೃಷ್ಣ ಪಿ. ಎಲ್ ಕಾರ್ಯಕ್ರಮ ನಿರೂಪಿಸಿದರು.