HEALTH TIPS

ಬಿಜೆಪಿ ಉತ್ತರ ವಲಯ ಪರಿವರ್ತನಾ ಯಾತ್ರೆಗೆ ಕುಂಬಳೆಯಿಂದ ವಿದ್ಯುಕ್ತ ಚಾಲನೆ

ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಮರ್ಶೆಗೊಳಿಸುವ ಹೆಸರಲ್ಲಿ ಪ್ರತಿಪಕ್ಷಗಳು ರಾಷ್ಟ್ರ ವಿರೋಧಿ ನಿಲುವುಗಳನ್ನು ಪ್ರಕಟಿಸುತ್ತಿರುವುದು ಆತಂಕಕಾರಿಯಾಗಿದೆ. ಮೋದಿಯ ನೇತೃತ್ವದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯನ್ನು ಕುಗ್ಗಿಸುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಹೂಡುತ್ತಿರುವ ಹುನ್ನಾರಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕೇರಳದ ಜನಸಾಮಾನ್ಯರಿಗೆ ಕೇಂದ್ರ ಸರಕಾರದ ಜನಪರ ಚಟುವಟಿಕೆಗಳ ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಸಿ.ಕೆ.ಪದ್ಮನಾಭನ್ ತಿಳಿಸಿದರು. ಬಿಜೆಪಿ ರಾಜ್ಯ ಸಮಿತಿಯ ಆಶ್ರಯದಲ್ಲಿ ಶಬರಿಮಲೆ ವಿಷಯದಲ್ಲಿ ರಾಜ್ಯ ಸರಕಾರದ ಧರ್ಮ ವಿರೋಧಿ ಕಾರ್ಯತಂತ್ರ ಮತ್ತು ಕೇಂದ್ರ ಸರಕಾರದ ಅಭಿವೃದ್ದಿ ಚ ಟುವಟಿಕೆಗಳನ್ನು ಹಳಿತಪ್ಪಿಸುವ ಪ್ರತಿಪಕ್ಷಗಳ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ವಿರೋಧಿಸಿ ಬಿಜೆಪಿ ಹಮ್ಮಿಕೊಂಡಿರುವ ಉತ್ತರ ವಲಯ ಪರಿವರ್ತನಾ ಯಾತ್ರೆಯನ್ನು ಮಂಗಳವಾರ ಸಂಜೆ ಕುಂಬಳೆಯಲ್ಲಿ ಜಾಥಾ ನಾಯಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಜನಪ್ರಿಯತೆಯಿಂದ ಪ್ರತಿಪಕ್ಷಗಳು ತೀವ್ರ ಕಳವಳಗೊಂಡಿದ್ದು, ಈ ಕಾರಣದಿಮದ ಮಹಾ ಘಟಿಬಂದನ್ ನಂತಹ ಕೃತ್ಯಕ್ಕೆ ಮುಂದಾಗಿದೆ. ಆದರೆ ರಾಷ್ಟ್ರದ ಪ್ರಜ್ಞಾವಮತ ನಾಗರಿಕರಿಗೆ ಯಾರ ಕ್ಯಯೊಳಗೆ ಇದ್ದರೆ ಸುರಕ್ಷಿತ ಎಂಬ ಅರಿವು ಇದೆ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರವು ಕಠಿಣ ನಿಲುವಿನ ಮೂಲಕ ಅಸುರಕ್ಷಿತ ಆರ್ಥಿಕ ವ್ಯವಹಾರವನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ. ಆದರೆ ಈ ಯೋಜನೆಯ ಆರಂಭದಲ್ಲಿ ಜನತೆಗೆ ಒಂದಷ್ಟು ತೊಡಕುಗಳಾಗಿದ್ದರೂ ಅದು ತಾತ್ಕಾಲಿಕವಾಗಿದ್ದು, ಆರ್ಥಿಕ ಶಿಸ್ತು ಅಭಿವೃದ್ದಿಯ ನೈಜ ಸಾಕಾರತೆಯ ಸೂಕ್ಷ್ಮವಾಗಿದೆ ಎಂದು ಅವರು ತಿಳಿಸಿದರು. ಪುಲ್ವಾಮಾ ಉಗ್ರ ಧಾಳಿ ಮತ್ತು ಆ ಬಳಿಕ ಭಾರತೀಯ ಸೇನೆ ನಿರ್ವಹಿಸಿದ ಪ್ರತಿಧಾಳಿಯ ಬಗ್ಗೆ ಕಾಂಗ್ರೆಸ್ಸ್ ಇಂದು ರಾಷ್ಟ್ರ ವಿರೋಧಿ ಮಾತುಗಳನ್ನು ಆಡುತ್ತಿದೆ. ರಾಜಕೀಯದ ಹೆಸರಲ್ಲಿ ರಾಷ್ಟ್ರದ ಮಾನ ಕಾಯುವ ಸೈನಿಕರನ್ನು ಅವಮಾನಿಸಿರುವುದು ಕಾಂಗ್ರೆಸ್ಸ್ ಸಹಿತ ಅದರ ಮಿತ್ರ ಪಕ್ಷಗಳ ಆಂತರಂಗಿಕವಾದ ದೇಶ ವಿರೋಧಿ ಮನೋಸ್ಥಿತಿಯನ್ನು ಬಯಲುಗೊಳಿಸಿದೆ. ಇಂತಹ ಮಂದಿಗಳ ಕೈಗೆ ರಾಷ್ಟ್ರದ ಆಡಳಿತ ಚುಕ್ಕಾಣಿ ಬಂದಲ್ಲಿ ತೀವ್ರ ಹದಗೆಡುವ ಭೀತಿಯಿದೆ ಎಂದು ಅವರು ತಿಳಿಸಿದರು. ಶಬರಿಮಲೆ ಆಚಾರ ಅನುಷ್ಠಾನಗಳನ್ನು ನಿಯಂತ್ರಿಸಲು ರಾಜ್ಯದ ಎಡರಂಗ ಸರಕಾರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಇಬ್ಬರು ಮಹಿಳೆಯರನ್ನು ಮಧ್ಯರಾತ್ರಿ ಹೊತ್ತು ಮಾರು ವೇಶದಲ್ಲಿ ಶಬರಿಮಲೆಗೆ ತಲಪಿಸುವಲ್ಲಿ ಯಶಸ್ವಿಯಾಗಿರುವ ಪಿಣರಾಯಿ ಸರಕಾರ ಇದೀಗ ಆ ಮಹಿಳೆಯರಿಗೆ ಸಚಿವ ಮಟ್ಟದ ಭದ್ರತೆಯನ್ನು ನೀಡುವ ಮೂಲಕ ಸಂರಕ್ಷಿಸಬೇಕಾದ ಹೊಣೆ ಹೊತ್ತಿರುವುದು ದೌರ್ಭಾಗ್ಯಕರ ಎಂದು ಅವರು ರಾಜ್ಯ ಸರಕಾರವನ್ನು ಲೇವಡಿಗೈದರು. ಬಿಜೆಪಿ ಉತ್ತರ ವಲಯ ಅಧ್ಯಕ್ಷ ವಿ.ವಿ. ರಾಜನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ರಾಷ್ಟ್ರದ 84.8 ಶೇ. ಜನರು ಆಗ್ರಹಿಸುತ್ತಿದ್ದಾರೆ. ಆದರೆ ಮೋದಿಯವರ ಜನಪರ ಕಾರ್ಯಕ್ರಮಗಳಿಗೆ ಮಸಿ ಬಳಿಯುವ ಯತ್ನದಲ್ಲಿರುವ ಪ್ರತಿಪಕ್ಷಗಳು ದೇಶದ್ರೋಹದ ಚಟುವಟಿಕೆಗಳಲ್ಲಿ ವ್ಯಸ್ತವಾಗಿ ಇನ್ನೂ ಜೀವಂತವಿರುವುದು ಇಲ್ಲಿಯ ಪ್ರಜಾಪ್ರಭುತ್ವದಿಂದ ಎಂದು ಗುಡುಗಿದರು. ರಾಷ್ಟ್ರ ಬದ್ದತೆಯ ಪಣಹೊತ್ತಿರುವ ಸೈನಿಕರನ್ನು ಅವಮಾನಿಸುವ ರಾಹುಲ್ ಗಾಂಧಿಗೆ ರಾಷ್ಟ್ರೀಯ ಪರಿಕಲ್ಪನೆ, ದೇಶ ಪ್ರೇಮ, ಸಂಸ್ಕಾರಗಳು ಯಾವ ಮಟ್ಟದಲ್ಲಿದೆ ಎನ್ನುವುದನ್ನು ಜಗಜ್ಜಾಹೀರುಗೊಳಿಸಿದೆ ಎಂದು ತಿಳಿಸಿದರು. ಜನಧನ್ವ ಯೋಜನೆ, ಉಚಿತ ಅಡುಗೆ ಅನಿಲಗಳನ್ನು 8 ಕೋಟಿ ಜನರಿಗೆ ತಲಪಿಸಿರುವುದು, ಪ್ರಸ್ತುತ ಜಾರಿಯಲ್ಲಿರುವ ಕಿಸಾನ್ ಸಮೃದ್ದಿ ಯೋಜನೆಗಳೇ ಮೊದಲಾದ ಹತ್ತು ಹಲವು ಯೋಜನೆಗಳನ್ನು ಕೇರಳದಲ್ಲಿ ಜಾರಿಗೊಳಿಸದಂತೆ ಮಾಡುವಲ್ಲಿ ಎಡರಂಗ ಹುನ್ನಾರ ನಡೆಸಿದೆ ಎಂದು ಆರೋಪಿಸಿದ ಅವರು ಪ್ರಜ್ಞಾವಂತ ನಾಗರಿಕರು ಸತ್ಯವನ್ನು ಅರ್ಥೈಸುವರು ಎಂದು ತಿಳಿಸಿದರು. ಜಾಥಾ ನಾಯಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್, ರಾಜ್ಯ ಉಪಾಧ್ಯಕ್ಷ ಶ್ರೀಶನ್ ಮಾಸ್ತರ್, ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್, ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾೈಕ್, ರಾಜ್ಯ ಸೆಲ್ ಸಂಯೋಜಕ ಕೆ.ರಂಜಿತ್, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ.ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸ್ವಾಗತಿಸಿ, ಮಂಜೇಶ್ವರ ಮಂಡಲ ಅಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries