ದಾಸ ಸಾಹಿತ್ಯ ವಿಶೇಷೋಪನ್ಯಾಸ ಮತ್ತು ದಾಸ ಸಂಕೀರ್ತನೆ
0
ಮಾರ್ಚ್ 29, 2019
ಕಾಸರಗೋಡು: ಪ್ರೊ. ಚಾಪಾಡಿ ವಾಸುದೇವ ಪ್ರಾಯೋಜಿತ ದಾಸ ಸಾಹಿತ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ ಹಾಗೂ ದಾಸ ಸಂಕೀರ್ತನೆಯು ಇತ್ತೀಚೆಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಿತು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಲಕ್ಷ್ಮಿ ಕೆ ದಾಸ ಸಾಹಿತ್ಯದ ಮಹತ್ವದ ಕುರಿತು ವಿಶೇಷೋಪನ್ಯಾಸ ನೀಡಿದರು. ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ರತ್ನಾಕರ ಮಲ್ಲಮೂಲೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಬಿ ಎಂ ಸ್ವಾಗತಿಸಿ,ಶಿಕ್ಷಕಿ ಬಬಿತಾ ಎ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರಾದ ಶ್ರದ್ಧಾ ಭಟ್ ನಾಯರ್ಪಳ್ಳ ಮತ್ತು ರಮ್ಯಶ್ರೀ ಅಂಬಕಾನ ಇವರಿಂದ ದಾಸರ ಪದಗಳ ಗಾಯನ ನಡೆಯಿತು.