ಎ-ಸ್ಯಾಟ್ ಮಿಸೈಲ್: ಯಾವುದೇ ದೇಶದ ವಿರುದ್ಧವಲ್ಲ, ನಮ್ಮ ದೇಶದ ರಕ್ಷಣೆಗಾಗಿ ಮಾತ್ರ!
0
ಮಾರ್ಚ್ 28, 2019
ನವದೆಹಲಿ: ಬಾಹ್ಯಾಕಾಶದಲ್ಲಿ ಸಕ್ರಿಯ ಉಪಗ್ರಹವೊಂದನ್ನು ಎ-ಸ್ಯಾಟ್ ಕ್ಷಿಪಣಿ ಬಳಕೆ ಮಾಡಿ ಹೊಡೆದುರುಳಿಸಲಾಗಿದ್ದು, ಇದು ನಮ್ಮ ಹೊಸ ಶಕ್ತಿಯಷ್ಟೇ. ನಮ್ಮ ಈ ಸಾಥ್ರ್ಯವನ್ನು ಯಾವುದೇ ದೇಶದ ವಿರುದ್ಧವೂ ಪ್ರಯೋಗಿಸುವುದಿಲ್ಲ. ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಎ-ಸ್ಯಾಟ್ ಮಿಸೈಲ್ ನಮ್ಮ ಬಾಹಾಕ್ಯಾಶ ಕಾರ್ಯಕ್ರಮಗಳಿಗೆ ಹೊಸ ಬಲವನ್ನು ತುಂಬಲಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನಾನೊಂದನ್ನು ಖಚಿತಪಡಿಸುತ್ತೇನೆ. ನಮ್ಮ ಸಾಮಥ್ರ್ಯವನ್ನು ಯಾರ ವಿರುದ್ಧವೂ ಪ್ರಯೋಗಿಸುವುದಿಲ್ಲ. ಆದರೆ, ಇದು ಸಂಪೂರ್ಣವಾಗಿ ಭಾರತದ ರಕ್ಷಣಾ ಉಪಕ್ರಮಗಳಿಗೆ ಮತ್ತು ಭದ್ರತೆಗೆ ಬಳಸಲಾಗುತ್ತದೆ. ಬಾಹ್ಯಾಕಾಶದಲ್ಲಿನ ಶಸ್ತ್ರಗಳನ್ನು ನಾವು ವಿರೋಧಿಸುತ್ತೇವೆ. ಈ ಪರೀಕ್ಷೆಯಿಂದ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳನ್ನಾಗಲಿ ಅಥವಾ ಕಾನೂನಾಗಲಿ ನಾವು ಉಲ್ಲಂಘಿಸುವುದಿಲ್ಲ ಎಂದು ಮೋದಿ ತಿಳಿಸಿದ್ದಾರೆ.
'ಆಂಟಿ ಸೆಟಲೈಟ್- (ಎ ಸ್ಯಾಟ್) ಕ್ಷಿಪಣಿಯ ಯಶಸ್ದೀ ಪ್ರಯೋಗ ಭಾರತದ ಭದ್ರತೆ ವಿಷಯದಲ್ಲಿ ಮಹತ್ವದ ಸಾಧನೆಯಾಗಿದೆ. ಶತ್ರುದೇಶದ ಉಪಗ್ರಹಗಳನ್ನು ನಾಶಪಡಿಸುವ ಮಹತ್ವದ ಶಕ್ತಿ ಭಾರತಕ್ಕೀಗ ಪ್ರಾಪ್ತವಾಗಿದೆ.
'ಈ ಸಾಧನ ನಮ್ಮ ರಕ್ಷಣೆಗಾಗಿ ಅಷ್ಟೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣದ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದೂ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.