ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಪಯ್ಯನ್ನೂರು, ಕಲ್ಯಾಶ್ಶೇರಿ ಮತ್ತಿತರ ವಿಧಾನಸಭಾ ಕ್ಷೇತ್ರಗಳ ಹಲವು ಮತಗಟ್ಟೆಗಳಲ್ಲಿ ಕಳ್ಳಮತ ಚಲಾಯಿಸಲ್ಪಟ್ಟಿವೆಯೆಂದೂ ಅಂತಹ ಮತಗಟ್ಟೆಗಳಲ್ಲಿ ಮತ್ತು ಶೇ.90 ಕ್ಕಿಂತ ಅಧಿಕ ಮತದಾನ ನಡೆದ ಮತಗಟ್ಟೆಗಳೂ ಸೇರಿದಂತೆ ನೂರರಷ್ಟು ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಆಗ್ರಹಿಸಿ ಜಿಲ್ಲಾ„ಕಾರಿಗೆ ಮನವಿ ಸಲ್ಲಿಸಲು ಯುಡಿಎಫ್ ತೀರ್ಮಾನಿಸಿದೆ.
ಕಳ್ಳಮತ ನಡೆದ ವೆಬ್‍ಕಾಸ್ಟ್ ದೃಶ್ಯಗಳು ಹೊರ ಬಂದಿವೆ. ಆ ಬಗ್ಗೆ ರಾಜ್ಯ ಚುನಾವಣಾ ಸಮಿತಿ ಇನ್ನೊಂದೆಡೆ ತನಿಖೆ ನಡೆಸಿ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲು ಮುಂದಾಗಿದೆ. ಇಂತಹ ಸಂದರ್ಭದಲ್ಲೇ ಮರುಮತದಾನಗೈಯುವ ಬೇಡಿಕೆಯೊಂದಿಗೆ ಯುಡಿಎಫ್ ನೇತೃತ್ವ ರಂಗಕ್ಕಿಳಿದಿದೆ. ಇದರಿಂದ ಇಂತಹ ಮತಗಟ್ಟೆಗಳಲ್ಲಿ ಮರುಮತದಾನ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.