11 ನಾಮಪತ್ರಿಕೆಗಳಿಗೆ ಅಂಗೀಕಾರ : 9 ಮಂದಿ ಅಭ್ಯರ್ಥಿಗಳು ರಂಗದಲ್ಲಿ
0
ಏಪ್ರಿಲ್ 05, 2019
ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ನಾಮಪತ್ರಿಕೆ ಸಲ್ಲಿಸಿದ 11 ಅಭ್ಯರ್ಥಿಗಳ ನಾಮಪತ್ರಿಕೆಗಳನ್ನು ಸೂಕ್ಷ್ಮ ಪರಿಶೀಲನೆ ನಂತರ ಅಂಗೀಕರಿಸಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ಆಗಿರುವ ಇಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಡಮ್ಮಿ ಅಭ್ಯರ್ಥಿಗಳಾಗಿದ್ದ ಸಿ.ಎಚ್.ಕುಂಞÂಂಬು(ಸಿ.ಪಿ.ಎಂ.) ಮತ್ತು ಸಂಜೀವ ಶೆಟ್ಟಿ(ಬಿ.ಜೆ.ಪಿ.) ಅವರು ತಮ್ಮ ನಾಮಪತ್ರಿಕೆ ಹಿಂತೆಗೆದುಕೊಂಡಿದ್ದಾರೆ.
ಈಗ ರಂಗದಲ್ಲಿರುವ 9 ಅಭ್ಯರ್ಥಿಗಳು :
1.ಕೆ.ಪಿ.ಸತೀಶ್ಚಂದ್ರನ್ (ಸಿ.ಪಿ.ಎಂ.)
2. ರಾಜ್ ಮೋಹನ್ ಉಣ್ಣಿತ್ತಾನ್(ಕಾಂಗ್ರೆಸ್)
3. ಕುಂಟಾರು ರವೀಶ ತಂತ್ರಿ(ಬಿ.ಜೆ.ಪಿ.)
4. ನ್ಯಾಯವಾದಿ ಬಶೀರ್ ಆಲಡಿ(ಬಿ.ಎಸ್.ಪಿ.)
5. ಗೋವಿಂದನ್ ಬಿ.ಆಲಿನ್ ತಾಳೆ(ಅಂಬೇಡ್ಕರ್ ಅಟ್ ಪಾರ್ಟಿ ಆ???ಂಡಿಯಾ)
6.ಸಜಿ(ಸ್ವತಂತ್ರ)
7.ನರೇಂದ್ರ ಕುಮಾರ್ ಕೆ.(ಸ್ವತಂತ್ರ)
8.ರಣದಿವನ್ ಆರ್.ಕೆ.(ಸ್ವತಂತ್ರ)
9.ರಮೇಶನ್ ಬಂದಡ್ಕ(ಸ್ವತಂತ್ರ)
ಲೋಕಸಭಾ ಕ್ಷೇತ್ರ ಮಟ್ಟದ ಚುನಾವಣೆ ನಿರೀಕ್ಷಕ ಎಸ್.ಗಣೇಶ್, ಅಭ್ಯರ್ಥಿಗಳ ಪ್ರಧಾನ ಏಜೆಂಟರು, ಸ್ವತಂತ್ರ ಅಭ್ಯರ್ಥಿಗಳು ಮೊದಲಾದವರ ಸಮಕ್ಷದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಯಿತು.
ಅಭ್ಯರ್ಥಿಗಳ ಪ್ರತಿನಿಧಿಗಳಾಗಿ ಅನಂತರಾಮ ಸದಾನಂದ ರೈ, ಕೆ.ವಿಪಿನ್ ಮೋಹನ್ ಉಣ್ಣಿತ್ತಾನ್, ಪಿ.ಕೆ.ಫೈಝಲ್, ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಗೋವಿಂದನ್ ಪಳ್ಳಿಕಾಪಿಲ್, ಕೆ.ಕುಮಾರನ್ ನಾಯರ್, ರಮೇಶನ್ ಕೆ., ಕೃಷ್ಣನ್ ಕುಟ್ಟಿ, ಎ.ಮಾಧವನ್, ಆನಂದ ಎ., ಷೈಜು ಟಿ.ಕೆ., ಕೆ.ಮೋಹನ್ ಜೋಸ್ ಪಾದಾಲಿಲ್, ಅಭ್ಯರ್ಥಿಗಳಾದ ಗೋವಿದನ್ ಬಿ.ಆಲಿನ್ ತಾಳೆ, ರಮೇಶನ್ ಬಂದಡ್ಕ, ಸಜಿ ಎಂಬವರು ಸೂಕ್ಷ್ಮ ಪರಿಶೀಲನೆ ವೇಳೆ ಭಾಗವಹಿಸಿದ್ದರು. ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುರಹಮಾನ್, ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ವಿಭಾಗ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.