ಉಪ್ಪಳ ಮಣಿಮುಂಡ ಶಾಲೆಯ ಸಂಭ್ರಮದ 11 ನೇ ವಾರ್ಷಿಕೋತ್ಸವ
0
ಏಪ್ರಿಲ್ 01, 2019
ಉಪ್ಪಳ: ಉಪ್ಪಳ ಮಣಿಮುಂಡ ಶಾಲೆಯ 11 ನೇ ವಾರ್ಷಿಕೋತ್ಸವ ಒಳಯಂ ಡಿ ಎಂ ಕಬಾನದಲ್ಲಿ ಇತ್ತೀಚೆಗೆ ನಡೆಯಿತು.
ಕೇರಳ ಕರ್ನಾಟಕ ಗಡಿ ಪ್ರದೆಶವಾದ ಬಹುಭಾಷಾ ಸಂಗಮ ಭೂಮಿಯ ಭಾಷೆಗಳಾದ ಇಂಗ್ಲೀಷ್, ಹಿಂದಿ, ಕನ್ನಡ, ತುಳು, ಉರ್ದು, ಮಲಯಾಳಂ, ಅರಬಿಕ್ ಭಾಷೆಗಳಲ್ಲಿ ವಿದ್ಯಾರ್ಥಿಗಳು ಅತಿಥಿಗಳನ್ನು ಸ್ವಾಗತಿಸುವ ಮೂಲಕ ವಾರ್ಷಿಕ ಸಂಭ್ರಮಕ್ಕೆ ಚಾಲನೆ ದೊರಕಿತು.
ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶಮೀಮಾ ಇಕ್ಬಾಲ್ ವಾರ್ಷಿಕ ವರದಿಯನ್ನು ಮಂಡಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ಕೆ ವಿ ವಾರ್ಷಿಕ ಸಂಭ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಾಬ್ ಮೂಸಾ ಹಾಜಿ ಆಲುವಾಯಿ ವಹಿಸಿದ್ದರು. ಕಾಮಿಲ್ ಶಾಲೆಯ ಪ್ರಾಂಶುಪಾಲ ಮೊಯಿದ್ದೀನ್ ಕುಂಞÂ, ಕುಂಬಳೆ ಅಕಾಡಮಿಯ ಕಲೀಲ್, ಇಸ್ಮಾಯಿಲ್, ಜಾಫರ್ ಮುಸ್ಲಿಯಾರ್, ನೂರ್ ಮೊಹಮ್ಮದ್, ಇಸ್ಮಾಯಿಲ್ ದಾವೂದ್, ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಳಿಕ ವೇದಿಕೆಯಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ ಪೋಷಕರನ್ನು ಮನರಂಜಿಸಿತು. ಅಝೀಂ ಮಣಿಮುಂಡ ಸ್ವಾಗತಿಸಿ, ಮೊಯಿದ್ದೀನ್ ಕುಟ್ಟಿ ಮಾಸ್ತರ್ ಕುಂಡೇರಿ ವಂದಿಸಿದರು.