HEALTH TIPS

ಮತದಾನಕ್ಕೆ ಗುರುತುಚೀಟಿ ಬದಲು ಇತರ 11 ದಾಖಲೆಗಳಲ್ಲಿ ಒಂದನ್ನು ಬಳಸಬಹುದು

              ಕಾಸರಗೋಡು:  ಲೋಕಸಭೆ ಚುನಾವಣೆ ಇಂದು (ಏ.23) ನಡೆಯಲಿದ್ದು, ಮತದಾನ ನಡೆಸುವ ವೇಳೆ ಗುರುತುಚೀಟಿ ಇಲ್ಲದೇ ಇದ್ದಲ್ಲಿ 11 ದಾಖಲೆಗಳಲ್ಲಿ ಯಾವುದೇ ಒಂದನ್ನು ಗುರುತುಚೀಟಿ ರೂಪದಲ್ಲಿ ಬಳಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
    ಪಾಸ್ ಪೋರ್ಟ್, ವಾಹನ ಚಾಲನೆ ಪರವಾನಗಿ, ಕೇಂದ್ರ-ರಾಜ್ಯ ಸರಕಾರಿ, ಸಾರ್ವಜನಿಕ ಸಂಸ್ಥೆಗಳ ಗುರುತುಚೀಟಿ, ಬ್ಯಾಂಕ್, ಅಂಚೆ ಕಚೇರಿಗಳ ಫೊಟೋ ಲಗತ್ತಿಸಿದ ಪಾಸ್ ಪುಸ್ತಕ, ಪಾನ್ ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ದಾಖಲೆ ಪ್ರಕಾರ ನೀಡುವ ಸ್ಮಾರ್ಟ್ ಕಾರ್ಡ್, ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ನೌಕರಿ ಯೋಜನೆ ಪ್ರಕಾರದ ನೌಕರಿ ಕಾರ್ಡ್, ಉದ್ಯೋಗ ಮಂತ್ರಾಲಯ ಯೋಜನೆ ಪ್ರಕಾರದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಫೊಟೋ ಲಗತ್ತಿಸಿದ ಪಿಂಚಣಿ ದಾಖಲೆ, ಸಂಸದ, ಶಾಸಕರಿಗೆ ನೀಡುವ ಅಧಿಕೃತ ಗುರುತು ಚೀಟಿ, ಆಧಾರ್ ಕಾರ್ಡ್  ಎಂಬ ಚುನಾವಣೆ ಆಯೋಗ ತಿಲಿಸಿರುವ 11 ದಾಖಲೆಗಳಲ್ಲಿ ಒಂದನ್ನು ಬಳಸಿ ಮತದಾನ ಮಾಡಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
        43 ಸೂಕ್ಷ್ಮ ಪ್ರದೇಶ ಮತಗಟ್ಟೆಗಳ ಬಗ್ಗೆ ನೇರ ನಿಗಾ:
     ಚುನಾವಣೆಯ ದಿನ ಜಿಲ್ಲೆಯ 43 ಸೂಕ್ಷ್ಮ ಮತಗಟ್ಟೆಗಳ ಚಟುವಟಿಕೆಗಳ ಬಗ್ಗೆ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇರವಾಗಿ ನಿಗಾ ಇರಿಸಲಿದ್ದಾರೆ. 
    ಇದಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಈ ನಿಟ್ಟಿನಲ್ಲಿ ನಿಯಂತ್ರಣ ಕೊಠಡಿಯನ್ನೂ ಸಜ್ಜುಗೊಳಿಸಲಾಗಿದೆ. ಇಲ್ಲಿ ಒಂದು ಕಂಪ್ಯೂಟರ್ ನಲ್ಲಿ 6 ಮತಗಟ್ಟೆಗಳ ಚಟುವಟಿಕೆಗಳನ್ನು ನೇರವಾಗಿ ವೀಕ್ಷಿಸಲಾಗುವುದು. ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಿರುವ ವೆಬ್ ಕೆಮೆರ ಮೂಲಕ ಈ ನೇರ ದೃಶ್ಯಗಳನ್ನು ಈ ಕೊಠಡಿಯಲ್ಲಿ ಜಿಲ್ಲಾಧಿಕಾರಿ ಅವರ ನೇತೃತ್ವದ ತಂಡ ವೀಕ್ಷಿಸಲಿದೆ. ಬೂತ್ ಗಳಲ್ಲಿ ಪ್ರಿಸೈಡಿಂಗ್ ಅಧಿಕಾರಿ ಬಳಿಯಲ್ಲೇ ವೆಬ್ ಕೆಮೆರ ಸ್ಥಾಪಿಸಲಾಗುವುದು. ಯಾವುದೇ ಸೂಕ್ಷ್ಮಪ್ರದೇಶಗಳನ್ನು ಹೆಚ್ಚುವರಿಯಾಗಿ ನಿಗಾ ಇರಿಸುವ ಉದ್ದೇಶವಿದ್ದಲ್ಲಿ ಎರಡು ಪ್ರಾಜೆಕ್ಟರ್, ಎರಡು ದೊಡ್ಡ್ ಸ್ಕ್ರೀನ್ ಕೂಡ ಇರಿಸಲಾಗಿದೆ. ಏಕಕಾಲಕ್ಕೆ 12 ಮತಗಟ್ಟೆಗಳ ಚಟುವಟಿಕೆಗಳನ್ನು ಈ ಮೂಲಕ ದೊಡ್ಡ ಗಾತ್ರದಲ್ಲಿ ವೀಕ್ಷಿಸುವ ಸೌಲಭ್ಯಗಳಿವೆ.
    ಯಾವುದೇ ಮತಗಟ್ಟೆಯಲ್ಲಿ ಸಮಸ್ಯೆಗಳು ತಲೆದೊರಿದಲ್ಲಿ ಜಿಲ್ಲಾಧಿಕಾರಿ ನೇರವಾಗಿ ಆ ಮತಗಟ್ಟೆಯ ಪ್ರಿಸೈಡಿಂಗ್ ಅಧಿಕಾರಿಯನ್ನು ಸಂಪರ್ಕಿಸಿ, ಬೇಕಾದ ಆದೇಶಗಳನ್ನು ನೀಡಲಿದ್ದಾರೆ. ವಾರ್ತಾವಿನಿಮಯ ಪ್ರಕ್ರಿಯೆಯೂ ಈ ನಿಯಂತ್ರಣ ಕೊಠಡಿ ಮೂಲಕ ನಡೆಯಲಿದೆ. ಚುನಾವಣೆ ವಿಭಾಗ ಸಿಬ್ಬಂದಿ, ಜೀವ ವಿಮಾ ನಿಗಮ, ಕೆ.ಎಸ್.ಇ.ಬಿ., ಬಿ.ಎಸ್.ಎನ್.ಎಲ್. ಸಿಬ್ಬಂದಿ ಸಹಿತ 20 ಕ್ಕೂ ಅಧಿಕ ಸಿಬ್ಬಂದಿ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿರುವರು. ಅಕ್ಷಯ ಸಂಸ್ಥೆ ವೆಬ್ ಕೆಮೆರದ ಚಟುವಟಿಕೆ ಹೊಣೆ ಹೊತ್ತಿದೆ. ಬಿ.ಎಸ್.ಎನ್.ಎಲ್.ವೆಬ್ ಕಾಸ್ಟಿಂಗ್ ಗೆ ಬೇಕಾದ ನೆಟ್ ವರ್ಕ್ ಒದಗಿಸಲಿದೆ.
     ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ 4, ಉದುಮಾ ದಲ್ಲಿ 3, ಕಾಞÂಂಗಾಡ್ ನಲ್ಲಿ 13, ತ್ರಿಕರಿಪುರದಲ್ಲಿ 23 ಸೂಕ್ಷ್ಮ ಪ್ರದೇಶ ಮತಗಟ್ಟೆಗಳಿವೆ. ವೆಬ್ ಕಾಸ್ಟಿಂಗ್ ಟ್ರಯಲ್ ರನ್  ನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ನಿರೀಕ್ಷಕ ಎಸ್.ಗಣೆಶ್ ತಪಾಸಣೆ ನಡೆಸಿದರು.
   (ಸಮರಸ ಚಿತ್ರ ಮಾಹಿತಿ: ಕಾಸರಗೋಡು ಲೋಕಸಭಾ ಕ್ಷೇತ್ರದ ಮತ ಚಲಾವಣಾ ಯಂತ್ರ ಮಾದರಿ,
2)ಭಾನುವಾರ ರಾತ್ರಿ ಪೂರ್ಣಾವಧಿಯಾಗಿ ಕಾರ್ಯಾಚರಿಸಿದ ಜಿಲ್ಲಾಧಿಕಾರಿಗಳ ಕಾರ್ಯಾಲಯ ಕಲೆಕ್ಟರೇಟ್ ರಾತ್ರಿ ವಿದ್ಯುತ್ ದೀಪಗಳಿಂದ ಕಂಡುಬಂದ ರೀತಿ,
3)ಸೂಕ್ಷ್ಮ ಮತಗಟ್ಟೆ ವೀಕ್ಷಣೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದ ನಿಯಂತ್ರಣ ಕೊಠಡಿ,
4)ಮಾದರಿ ಮತಗಟ್ಟೆ.
)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries