ಉಪ್ಪಳ: ಅಮ್ಮೇರಿ ಚಿಪ್ಪಾರು ಗುತ್ತು ಶ್ರೀ ಮಲರಾಯಿ, ಧೂಮಾವತಿ ಹಾಗು ಪರಿವಾರ ದೈವಗಳ ದೈವಸ್ಥಾನದಲ್ಲಿ ನೇಮೋತ್ಸವ ಎ.12 ಮತ್ತು 13 ರಂದು ನಡೆಯಲಿದೆ.
ಏ.12 ರಂದು ಬೆಳಗ್ಗೆ 6.30 ಕ್ಕೆ ಗಣಹೋಮ, ನಾಗತಂಬಿಲ, ವೆಂಕಟರಮಣ ಪೂಜೆ, ದೈವಸ್ಥಾನ ಶುದ್ಧೀಕರಣ, ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆ, ಸಂಜೆ 4.30 ರಿಂದ ಯಕ್ಷಗಾನ ಗಾನ ವೈಭವ, ರಾತ್ರಿ 7 ಕ್ಕೆ ದೈವದ ಭಂಡಾರ ಆಗಮನ, 8.30 ಕ್ಕೆ ಅನ್ನಸಂತರ್ಪಣೆ, 10 ರಿಂದ ಪಂಜುರ್ಲಿ, ಕಲ್ಲುರ್ಟಿ, ಕೊರತಿ ಪರಿವಾರ ದೈವಗಳ ನೇಮೋತ್ಸವ ನಡೆಯುವುದು.
ಏ.13 ರಂದು ಬೆಳಿಗ್ಗೆ 10 ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಅಪರಾಹ್ನ 3 ರಿಂದ ಶ್ರೀ ಮಲರಾಯಿ ದೈವದ ನೇಮೋತ್ಸವ, 6.30 ಕ್ಕೆ ರಾಜ ಗುಳಿಗ ನೇಮೋತ್ಸವ, ರಾತ್ರಿ 8.15 ಕ್ಕೆ ಭಂಡಾರ ನಿರ್ಗಮನ, 8.30 ರಿಂದ ಅನ್ನಸಂತರ್ಪಣೆ, 9 ರಿಂದ ಸಾಂಸ್ಕøತಿಕ ಕಾರ್ಯಕ್ರಮ ಜರಗಲಿದೆ.