ಕಾಸರಗೋಡು: ಅಂತಾರಾಷ್ಟ್ರೀಯ ಕಾರ್ಮಿಕರ ದಿನವಾದ ಮೇ 1 ರಂದು ಜಿಲ್ಲೆಯ 12 ಕೇಂದ್ರಗಳಲ್ಲಿ ರ್ಯಾಲಿ ನಡೆಯಲಿದೆ.
ಎಡಪಕ್ಷಗಳ ಟ್ರೇಡ್ ಯೂನಿಯನ್‍ಗಳು, ಸೇವಾ ಸಹಕಾರಿ ಸಂಘಗಳು ಜಂಟಿಯಾಗಿ ರ್ಯಾಲಿ ಆಯೋಜಿಸಿದೆ. ಇದರ ಯಶಸ್ಸಿಗಾಗಿ ಸಂಘಾಟಕ ಸಮಿತಿ ರೂಪೀಕರಿಸಲಾಗಿದೆ. ಬೆಳಿಗ್ಗೆ 9 ಕ್ಕೆ ರ್ಯಾಲಿ ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ.
ಹೊಸಂಗಡಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಟಿ.ಕೃಷ್ಣನ್, ಕುಂಬಳೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಟಿ.ಕೆ.ರಾಜನ್, ಕಾಸರಗೋಡಿನಲ್ಲಿ ಕೆ.ಬಾಲಕೃಷ್ಣನ್, ಮುಳ್ಳೇರಿಯದಲ್ಲಿ ಸಿ.ಎಚ್.ಕುಂಞಂಬು, ಕುತ್ತಿಕ್ಕೋಲ್‍ನಲ್ಲಿ ಎಂ.ರಾಜಗೋಪಾಲನ್, ಪಾಲಕುನ್ನಿನಲ್ಲಿ ಕೆ.ವಿ.ಕುಂಞÂರಾಮನ್, ಕಾಂಞಂಗಾಡ್‍ನಲ್ಲಿ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಕೃಷ್ಣನ್, ಕಳ್ಳಾರಿನಲ್ಲಿ ಕೆ.ಪಿ.ಸತೀಶ್ಚಂದ್ರನ್, ಎಳೇರಿಯಲ್ಲಿ ಸಾಬು ಅಬ್ರಹಾಂ, ನೀಲೇಶ್ವರದಲ್ಲಿ ಪಿ.ಕರುಣಾಕರನ್, ಚೆರ್ವತ್ತೂರಿನಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್, ತೃಕ್ಕರಿಪುರದಲ್ಲಿ ವಿಪಿಪಿ ಮುಸ್ತಫ ರ್ಯಾಲಿ ಉದ್ಘಾಟಿಸುವರು.