ಬದಿಯಡ್ಕ: ಲಾಸ್ಯ ರಂಜಿನಿ ನೃತ್ಯಶಾಲೆಯಾಗಿ 2005ರಲ್ಲಿ ಆರಂಭಗೊಂಡ ಸಂಸ್ಥೆ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ,ಶೈಕ್ಷಣಿಕ, ವೇದ, ಕಲಾರಂಗಗಳೇಋ ಮೊದಲಾದ ಬಹುವಿಧದ ಆಯಾಮಗಳಲ್ಲಿ ಭಾರತೀಯ ಸಂಸ್ಕøತಿಯನ್ನು ಪ್ರಜ್ವಲಿಸುವಂತೆ ಮಾಡುವ ಸದುದ್ದೇಶದಿಂದ 2013 ರ ಮಾ.22 ರಂದು "ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ" ಎಂಬ ಹೆಸರಿನೊಂದಿಗೆ ಮರು ಹುಟ್ಟು ಪಡೆದ ಸಂಸ್ಥೆ ನೃತ್ಯ, ಸಂಗೀತ, ಯಕ್ಷಗಾನ, ಸಾಹಿತ್ಯ, ಚಿತ್ರಕಲೆ, ಯೋಗ, ವೇದ, ನಾಟಕ, ಭಜನೆ, ಕರಕುಶಲ ವಸ್ತುಗಳ ತಯಾರಿ ಮುಂತಾದ ವಿಷಯಗಳಿಗೆ ತರಬೇತಿ ನೀಡುವುದು, ವಿದ್ಯಾರ್ಥಿ ವೇತನ, ಸಂಶೋಧನೆ, ಆಟೋಟಗಳಿಗೆ ಪ್ರೋತ್ಸಾಹ, ಗ್ರಂಥ ಪ್ರಕಟಣೆ, ಶಾಲೆ - ಗ್ರಂಥಾಲಯ - ಸಮುದಾಯ ಭವನ ಸ್ಥಾಪನೆ, ಆರೋಗ್ಯ ಶಿಬಿರಗಳನ್ನು ನಡೆಸುವುದು ಹೀಗೆ ಹತ್ತಾರು ಹೆಗ್ಗುರಿಗಳನ್ನು ತನ್ನ ನಡಾವಳಿಯಲ್ಲಿ ಹಮ್ಮಿಕೊಂಡಿದೆ.
ಸಂಸ್ಥೆಯ ವಾರ್ಷಿಕೋತ್ಸವ ಏ. 12 ರಂದು ಎಡನೀರಿನ ಸ್ವಾಮೀಜೀಸ್ ಶಾಲಾ ವಠಾರದಲ್ಲಿ ವಾರ್ಷಿಕೋತ್ಸವ ಹಮ್ಮಿಕೊಂಡಿದೆ. ಸಂಜೆ 5.30 ಕ್ಕೆ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಉಪಜಿಲ್ಲಾ ನಿವೃತ್ತ ಉಪಶಿಕ್ಷಣಾಧಿಕಾರಿ ಕೈಲಾಸ ಮೂರ್ತಿ. ಕೆ. ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ಸಂಗೀತ ಶಿಕ್ಷಕ ವಿದ್ವಾನ್ ನಟರಾಜ ಶರ್ಮಾ .ಬಿ. ಹಾಗೂ ಸಂಗೀತ ಗುರು ವಿದುಷಿ ಉಷಾ ಈಶ್ವರ ಭಟ್ ಉಪಸ್ಥಿತರಿರುವರು.
ಸಂಜೆ 6 ರಿಂದ ಪ್ರತಿಷ್ಠಾನದ ಶಿಷ್ಯವೃಂದದವರಿಂದ ನೃತ್ಯ ಸಿಂಚನ ನಡೆಯಕಿದೆ. ನಟುವಾಂಗ ಹಾಗೂ ನೃತ್ಯ ನಿರ್ದೇಶನವನ್ನು ವಿದುಷಿ ಅನುಪಮಾ ರಾಘವೇಂದ್ರ ಮಾಡಲಿದ್ದು, ಹಾಡುಗಾರಿಕೆಯಲ್ಲಿ ವಸಂತ ಕುಮಾರ ಗೋಸಾಡ ಹಾಗೂ ಶಿಲ್ಪಾ ಚೈತನ್ಯ ವಾಶೆಮನೆ ಸಹಕರಿಸುವರು. ಮೃದಂಗದಲ್ಲಿ ರಾಜೀವ ಗೋಪಾಲ್ ವೆಳ್ಳಿಕ್ಕೋತ್ ಹಾಗೂ ವಯೋಲಿನ್ ನಲ್ಲಿ ವಿದ್ವಾನ್ ಬಾಲರಾಜ್ ಮುಳ್ಳೇರಿಯ ಸಹಕರಿಸುವರು.