HEALTH TIPS

ಸಮರಸ-ಮಹಾ ಭಾರತದ ಜನತಂತ್ರದ ದಿಟ್ಟ ಹೆಜ್ಜೆಗಳು-ಭಾಗ 13-ಸ್ವತಂತ್ರ ಭಾರತದಲ್ಲಿ 'ಚುನಾವಣೆ' ಇತಿಹಾಸ...

 
      ಚುನಾವಣೆಗಳು ಎಂದರೆ ಇವತ್ತಿಗೆ ದೊಡ್ಡ ಜಾತ್ರೆ; ವಿಜಯೋತ್ಸವ. ಸೋತವರ ಹೀಯಾಳಿಕೆ ಮತ್ತು ಭವಿಷ್ಯದ ಚುನಾವಣೆಗಳ ದಿಕ್ಸೂಚಿಗಳು. ಆದರೆ, ಸ್ವಾತಂತ್ರ್ಯ ನಂತರ ಭಾರತದಲ್ಲಿ ಚುನಾವಣೆ ಎಂಬ ಪ್ರಕ್ರಿಯೆ ಹೇಗೆ ಆರಂಭವಾಯಿತು ಎಂಬುದನ್ನು ನೋಡಿದರೆ ಕೆಲವೊಂದು ಕುತೂಹಲಕಾರಿ ಕತೆಗಳು ಸಿಗುತ್ತದೆ.
    ಸಂವಿಧಾನಬದ್ಧವಾಗಿ ಸಿಕ್ಕ ಮತದಾನದ ಹಕ್ಕನ್ನು ಚಲಾಯಿಸಲು ಸ್ವಾತಂತ್ರ್ಯೋತ್ತರ ಭಾರತದ ಮೊದಲ ಚುನಾವಣೆ 1951ರ ಅಕ್ಟೋಬ???ನಲ್ಲಿ ಆರಂಭವಾಯಿತು. ಅದರ ಪ್ರಕ್ರಿಯೆಗಳು ಮುಗಿದು ದೇಶದ ಮೊದಲ ಚುನಾಯಿತ ಸರಕಾರ ಅಧಿಕಾರಕ್ಕೆ ಬರಲು ತೆಗೆದುಕೊಂಡಿದ್ದು ಸುಮಾರು ನಾಲ್ಕು ತಿಂಗಳು.
   ಆಗಿನ್ನೂ ಸಾಕಷ್ಟು ಹಿಂದುಳಿದಿದ್ದ ದೇಶದ ಗ್ರಾಮೀಣ ಪರಿಸರದಲ್ಲಿ ಮತ ಎಂದರೇನು ಎಂಬ ಬಗ್ಗೆಯೇ ಮಾಹಿತಿ ಇರದ ದಿನಗಳವು. 17. 3 ಕೋಟಿ ಮತದಾರರಲ್ಲಿ ಶೇ. 70ರಷ್ಟು ಅನಕ್ಷರಸ್ಥರು. ಹೀಗಾಗಿ ಮೊದಲ ಚುನಾವಣೆಗೆ ಒಂದು ತಿಂಗಳು ಮುಂಚೆಯಷ್ಟೆ, ಕೆಲವು ಕಡೆಗಳಲ್ಲಿ ಪ್ರಾಯೋಗಿಕವಾಗಿ ಚುನಾವಣೆಗಳನ್ನು ನಡೆಸಿ ಜನರ ಪ್ರತಿಕ್ರಿಯೆಗಳನ್ನು ಪರೀಕ್ಷಿಸಲಾಯಿತು.
    ಅಂತಹದೊಂದು ಮೊದಲ ಪರೀಕ್ಷಾರ್ಥ ಚುನಾವಣೆ ನಡೆದಿದ್ದು ದಿಲ್ಲಿ ಸಮೀಪ ನಂಗೋಲಿ ಎಂಬ ಪ್ರದೇಶದಲ್ಲಿ. ಶೇ. 45. 7ರಷ್ಟು ಜನ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯವನ್ನು ನಿಜವಾಗಿಸುವ ಪ್ರಾಯೋಗಿಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
   ಪರೀಕ್ಷಾರ್ಥ ಚುನಾವಣೆ ನಂತರ ಈ ವಿಶಾಲ ದೇಶದಲ್ಲಿ ಚುನಾವಣೆ ಪ್ರಕ್ರಿಯೆಗಳು ಆರಂಭವಾದವು. ಹಳ್ಳಿಗಾಡು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವುದು ದೊಡ್ಡ ಸವಾಲಿನ ಕೆಲಸವಾಗಿತ್ತು. ಕತ್ತೆಗಳ ಮೇಲೆ ಮತಪೆಟ್ಟಿಗೆಗಳನ್ನು ಸಾಗಿಸಲಾಗಿತ್ತು. 1951ರ ಅಕ್ಟೋಬರ್ ತಿಂಗಳಿನಿಂದ 1952ರ ಫೆಬ್ರವರಿವರೆಗೂ ನಡೆದ ಮೊದಲ ಮಹಾ ಚುನಾವಣೆ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಜನರನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಅತಿ ದೊಡ್ಡ ಪ್ರಯೋಗವಾಗಿತ್ತು.
   ಕಳೆದ 65 ವರ್ಷಗಳಲ್ಲಿ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಸಾಕಷ್ಟು ಸುಧಾರಣೆಯಾಗಿದೆ. ಬ್ಯಾಲೆಟ್ ಪೇಪರ್ ಮತ್ತು ಮತಪೆಟ್ಟಿಗೆಗಳ ಜಾಗದಲ್ಲಿ ಇವತ್ತು ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು ಬಂದಿವೆ. ಮೊದಲಿನಂತೆ ಮತ ಎಣಿಕೆ ಆರಂಭವಾದರೆ ಇಡೀ ದಿನ ಕಾಯುವ ಅಗತ್ಯವಿಲ್ಲ. ಮತ ಎಣಿಕೆ ಆರಂಭವಾದ ಸುಮಾರು ಐದು ಗಂಟೆಗಳ ಅಂತರದಲ್ಲಿ ಸೋಲು ಮತ್ತು ಗೆಲುವಿನ ಅಂತರ ಸ್ಪಷ್ಟವಾಗುತ್ತದೆ.
   ಮೊದಲ ಚುನಾವಣೆ:
    ಮೊದಲ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಗತ್ಯವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಎಂಬ ದೊಡ್ಡ ಪಕ್ಷ ಜನಸಂಘ ಮತ್ತು ಸಿಪಿಎಂ ಪಕ್ಷಗಳಿಗೆ ಚುನಾವಣೆ ಎದುರಿಸಲು ಪ್ರೋತ್ಸಾಹಿಸಿತ್ತು. ಇವತ್ತು ಅದೇ ಕಾಂಗ್ರೆಸ್ ತನ್ನ ಮೂಲ ನೆಲೆಯನ್ನು ಉಳಿಸಿಕೊಳ್ಳಲಾಗದೆ ಐತಿಹಾಸಿಕ ಸೋಲಿಗೆ ಸಾಕ್ಷಿಯಾಗಿದೆ. ಮತದಾರರು ಕೂಡ ತಮ್ಮ ಆಲೋಚನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಅನಕ್ಷರಸ್ಥರಾಗಿದ್ದ ಭಾರತದ ಮತದಾರರು ಬರುಬರುತ್ತಾ ತಮ್ಮ ಚಾಣಾಕ್ಷತನವನ್ನು ಮತ ಚಲಾಯಿಸುವಲ್ಲಿಯೂ ಮೆರೆಯುತ್ತ ಬರುತ್ತಿದ್ದಾರೆ.
    ಅದರ ಮುಂದುವರಿದ ಭಾಗ ಎಂಬಂತೆ, ಚುನಾವಣೆ ಎಂಬುದು ಐತಿಹಾಸಿಕ ಪ್ರಕ್ರಿಯೆ ಮಾತ್ರವಲ್ಲ, ಉದ್ಯಮ ಕೂಡ ಎಂಬ ಆಲೋಚನಾ ಹಂತವನ್ನು ಮುಟ್ಟಿದ ಸಮಯದಲ್ಲೇ 2014ರ ಲೋಕಸಭೆ ಚುನಾವಣೆ ಬಂದಿತ್ತು. ಹಿಂದೆಂದೂ ಕಾಣದ ಮಾಹಿತಿ ತಂತ್ರಜ್ಞಾನದ ಬಳಕೆ ಮತ್ತು ಕ್ರೀಯಾಶೀಲ ಪ್ರಚಾರವನ್ನು ಇದರಲ್ಲಿ ಕಾಣಲಾಯಿತು. ಕೆಲವು ವರದಿಗಳ ಪ್ರಕಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಎಲ್ಲಾ ಮೂಲಗಳಿಂದ ಚುನಾವಣೆಗಾಗಿ ಖರ್ಚು ಮಾಡಿದ ಹಣ ಸುಮಾರು 30 ಸಾವಿರ ಕೋಟಿ ರೂಪಾಯಿಗಳು. ಅಂದರೆ, ಅಮೆರಿಕಾ ತನ್ನ ಅಧ್ಯಕ್ಷೀಯ ಚುನಾವಣೆಗಾಗಿ ಖರ್ಚುಮಾಡುವ 40 ಸಾವಿರ ಕೋಟಿಗಿಂತ ಕೊಂಚ ಕಡಿಮೆ ಅಷ್ಟೆ.
    ಇದಾದ ನಂತರ ಈಗ ಐದು ರಾಜ್ಯಗಳ ಫಲಿತಾಂಶ. ಇದು ಒಂದಷ್ಟು ಜನರಿಗೆ ಖುಷಿ ಕೊಟ್ಟಿದೆ. ಇನ್ನೊಂದು ವರ್ಗಕ್ಕೆ ಬೇಸರ ಮೂಡಿಸಿದೆ. ಈ ವೇಳೆಯಲ್ಲಿ ಚುನಾವಣೆಗಳು ಬೆಳೆದು ಬಂದ ಹಾದಿಯನ್ನು ನೆನಪು ಮಾಡಿಕೊಳ್ಳುವ ಅಗತ್ಯವೂ ಕಾಣಿಸುತ್ತಿದೆ. ದೇಶದ ಮೊದಲ ಚುನಾವಣೆಯ ಒಂದಷ್ಟು ಚಿತ್ರಗಳು ಇಲ್ಲಿವೆ. ನೋಡಿ, ನೆನಪುಗಳಿಗೆ ಮರಳಿ..



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries