ಅರುಣಾಚಲಪ್ರದೇಶ: ಚುನಾವಣಾ ಅಧಿಕಾರಿಗಳು ಸಂಕಷ್ಟಗಳ ನಡುವೆಯೂ ಚುನಾವಣಾ ಅಧಿಕಾರಿಗಳು ಅರುಣಾಚಲ ಪ್ರದೇಶದಲ್ಲಿ 13,583 ಅಡಿ ಎತ್ತರದ ಪ್ರದೇಶಕ್ಕೆ ನಡೆದು ಹೋಗಿದ್ದಾರೆ.
ಅರುಣಾಚಲ ಪ್ರದೇಶದ ಮುಕ್ತೊ ವಿಧಾನಸಭಾ ಕ್ಷೇತ್ರದ ಲುಗುತಂಗ್ ಗ್ರಾಮದಲ್ಲಿ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು 13,583 ಅಡಿ ನಡೆದು ಹೋಗಿದ್ದಾರೆ.
ರಾಜ್ಯದ 60 ವಿಧಾನಸಭಾ ಕ್ಷೇತ್ರಗಳು ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ಏ.11 ರಂದು ಮತದಾನ ನಡೆದಿತ್ತು.
ಸವಾಲಿನ ಪರಿಸ್ಥಿತಿಯಲ್ಲೂ ಚುನಾವಣೆ ನಡೆಸುವುದಕ್ಕೆ ನಡೆದು ಹೋದ ಅಧಿಕಾರಿಗಳ ಬಗ್ಗೆ ಚುನವಣಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಪ್ರವೇಶಿಸುವುದಕ್ಕೆ ಕಷ್ಟಸಾಧ್ಯವಿರುವ ಪ್ರದೇಶಗಳಿಗೆ ತಲುಪುವುದಕ್ಕೆ ಅಧಿಕಾರಿಗಳು 2 ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವೆಡೆ ಅಧಿಕಾರಿಗಳನ್ನು ಏರ್ ಲಿಫ್ಟ್ ಮಾಡಲಾಗಿದೆ. ರಾಜ್ಯದಲ್ಲಿ 7,98,249 ಮತದಾರರಿದ್ದು 2,202 ಮತಗಟ್ಟೆಗಳಿದ್ದವು.