HEALTH TIPS

ಸಿಂಧೂರ ಯವಕ ವೃಂದದ 18ನೇ ವಾರ್ಷಿಕೋತ್ಸವ -ಸನ್ಮಾನ, ಗೌರವಾರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಾಳೆ

ಬದಿಯಡ್ಕ: ಬೇಳ ವಿಷ್ಣುಮೂರ್ತಿ ನಗರದಲ್ಲಿ ಏ.5 ರಂದು ನಡೆಯಲಿರುವ ಶ್ರೀವಿಷ್ಣುಮೂರ್ತಿ ದೈವಗಳ ಒತ್ತೆಕೋಲ-ಕೆಂಡಸೇವಾ ಕಾರ್ಯಕ್ರಮದಂದು ಸ್ಥಳೀಯ ಸಿಂಧೂರ ಯುವಕ ವೃಂದದ 18ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ. ವಿಷ್ಣುಮೂರ್ತಿ ನಗರದ ಯುವಕರನ್ನು ಒಗ್ಗೂಡಿಸಿದ ಬೇಳ ದಿ.ದೂಮಣ್ಣ ಮಾಸ್ತರ್, ದಿ. ನಾರಾಯಣ ಪೋಲಿಸ್ ಹಾಗೂ ದಿ. ಗೋವಿಂದ ಮಣಿಯಾಣಿಯವರ ಮಾರ್ಗದರ್ಶನದಿಂದ ಸ್ಥಾಪಿತವಾದ ಸಿಂಧೂರ ಯುವಕ ವೃಂದವು ಪ್ರತೀ ಎರಡು ವರ್ಷಗಳಿಗೊಮ್ಮೆ ಜರಗುವ ಒತ್ತೆಕೋಲದಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸನ್ಮಾನ ಕಾರ್ಯಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿದೆ. ಅಲ್ಲದೆ ಊರಿನ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಉಚಿತ ಟ್ಯೂಷನ್,ನುರಿತ ವೈದ್ಯರುಗಳನ್ನು ಕರೆಸಿ ಉಚಿತ ವೈದ್ಯಕೀಯ ಶಿಬಿರ, ಕ್ರೀಡೆಗೆ ಪ್ರೋತ್ಸಾಹವನ್ನು ನೀಡಲು ಕ್ರಿಕೆಟ್, ಕಬಡ್ಡಿ, ಹಗ್ಗಜಗ್ಗಾಟ ಮೊದಲಾದ ಆಟೋಟಗಳನ್ನು ಆಯೋಜಿಸಿದೆ. ಅಶಕ್ತರಿಗೂ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆರ್ಥಿಕ ಸಹಾಯ, ಕ್ಲಬ್ ಸದಸ್ಯರ ಚಿಕಿತ್ಸಾ ಸಹಾಯವನ್ನು ನೀಡುತ್ತದೆ. ಊರಿನ ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರಮದಾನ ಸೇವೆಯನ್ನು ನೀಡುವಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಹೆಗ್ಗಳಿಕೆಯೂ ಸಿಂಧೂರ ಯುವಕ ವೃಂದಕ್ಕಿದೆ. ಏಪ್ರಿಲ್ 5ರಂದು ಸಂಭ್ರಮದಿಂದ ತನ್ನ 18 ನೇ ವಾರ್ಷಿಕೋತ್ಸವವನ್ನು ಆಚರಿಸುವ ಸಿಂಧೂರ ಯುವಕ ವೃಂದವು ಈ ಬಾರಿ ಊರಿನ ಹಿರಿಯರಾದ ವಿಷ್ಣುಮೂರ್ತಿ ಸೇವಾ ಸಮಿತಿಯ ಕೋಶಾಧಿಕಾರಿ ಏಣಿಯರ್ಪು ಚೋಯಿ ಮಣಿಯಾಣಿ ಹಾಗೂ ಏಣಿಯರ್ಪು ಕೋದಂರ್ಬತ್ತ್ ತರವಾಡಿನ ಪ್ರಧಾನ ಪೂಜಾರಿ ಬಾಲಕೃಷ್ಣ ರನ್ನು ಗೌರವಿಸಲಿದೆ. ಊರಿನ ಬಾಲ ಪ್ರತಿಭೆ ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕುಮಾರಿ ಅಪೇಕ್ಷಾ ಪೈ ಯನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಸಮಾರಂಭದ ಅಧ್ಯಕ್ಷತೆಯನ್ನು ವಿಷ್ಣುಮೂರ್ತಿ ಸೇವಾಸಮಿತಿಯ ಅಧ್ಯಕ್ಷ ಶ್ರೀಧರ ಪ್ರಸಾದ್ ಮಾಸ್ತರ್ ವಹಿಸಲಿರುವರು. ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರರು ಗೌರವಾರ್ಪಣೆ ಮಾಡಲಿರುವರು. ವಿಷ್ಣುಮೂರ್ತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಮಾಸ್ತರ್ , ಸಿಂಧೂರ ಯುವಕ ವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ, ಕಾರ್ಯದರ್ಶಿ ಪುಷ್ಪರಾಜ್ ರೈ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಮೊದಲಾದವರು ಉಪಸ್ಥಿತರಿರುವರು. ರಾತ್ರಿ 9 ಗಂಟೆಗೆ ಸಿಂಧೂರ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗಾಯ್ಸ್ ಕುಡ್ಲ ಕ್ವೀನ್ಸ್ ಮಂಗಳೂರು ಇವರಿಂದ ನೃತ್ಯ ಸಿಂಚನ ಕಾರ್ಯಕ್ರಮ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries