ಮುಂಬೈ: ಪ್ರೋ ಕಬಡ್ಡಿ ಲೀಗ್ (ಪಿಕೆಎಲ್) ಜುಲೈ.19 ರಿಂದ ಪ್ರಾರಂಭವಾಗಲಿದ್ದು ಅಕ್ಟೋಬರ್ 9 ರಂದು ಮುಕ್ತಾಯಗೊಳ್ಳಲಿದೆ.
ಏ.08 ರಂದು ಪಿಕೆಎಲ್ ನ 7 ನೇ ಸೀಸನ್ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ. ಈ ಹಿಂದಿನ ಸೀಸನ್ ಹಬ್ಬಗಳ ಸಾಲಿನಲ್ಲಿ ಬಂದಿದ್ದರಿಂದ ವೀಕ್ಷಕರ ಸಂಖ್ಯೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ಜುಲೈ ನಲ್ಲೇ ಪಿಕೆಎಲ್-7 ಉದ್ಘಾಟನೆ ಮಾಡಲಾಗುತ್ತಿದೆ ಎಂದು ಆಯುಕ್ತ ಅನುಪಮ್ ಗೋಸ್ವಾಮಿ ಹೇಳಿದ್ದಾರೆ. 2018 ರಲ್ಲಿ ಅಕ್ಟೋಬರ್ ತಿಂಗಳಲ್ಲಿ ಪಿಕೆಎಲ್ ಪ್ರಾರಂಭವಾಗಿತ್ತು.
2020 ರಲ್ಲಿ ಪ್ರಾರಂಭವಾಗುವ ಮುಂದಿನ ಸೀಸನ್ ನ್ನು ಸಹ ಜುಲೈ ತಿಂಗಳಲ್ಲೇ ಪ್ರಾರಂಭಿಸಲಾಗುತ್ತದೆ ಎಂದು ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ. ಪಿಕೆಎಲ್ ಹರಾಜಿನಲ್ಲಿ ಭಾರತದಿಂದ 388 ಆಟಗಾರರಿದ್ದರೆ, 53 ವಿದೇಶಿ ಆಟಗಾರರಿದ್ದಾರೆ.