ಮಂಜೇಶ್ವರ: ಚಿಗುರುಪಾದೆ ದಾರುನ್ನಜಾತ್ ಎಜ್ಯುಕೇಷನ್ ಸೆಂಟರ್ ನ 9 ನೇ ವಾರ್ಷಿಕ ಸಮ್ಮೇಳದಂಗವಾಗಿ ಶನಿವಾರ ರಾಜ್ಯಮಟ್ಟದಲ್ಲಿ ಎಸ್ ವೈ ಎಸ್ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಪ್ರತಿಭಾ ಸ್ಪರ್ಧೆಗಳ ಭಾಗವಾಗಿ ಚಿಗುರುಪಾದೆಯಲ್ಲಿ ಸುನ್ನೀ ಜಂಮೀಯತ್ತುಲ್ ಮುಹಲ್ಲಿಮೀನ್ ಸಂಘಟನೆಯ ಮಂಜೇಶ್ವರ ವಿಭಾಗದ ವತಿಯಿಂದ 17 ಮದ್ರಸಗಳ 150 ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.
ಸಿದ್ದೀಖ್ ಅಹ್ಸನಿ ದರ್ಕಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಸಿ.ಐ. ದಿನೇಶ್ ಎ.ವಿ ಉದ್ಘಾಟಿಸಿದರು.ಬಳಿಕ ಅಲ್ ನಜಾತ್ ಎಜ್ಯುಕೇಶನ್ ಸೆಂಟರ್ ವತಿಯಿಂದ ನಿರ್ಗತಿಕ ಕುಟುಂಬಕ್ಕೆ ನೀಡಲಾದ ಕಿಟ್ ನ್ನು ಮಂಜೇಶ್ವರ ಸಿ.ಐ. ಉದ್ಘಾಟಿಸಿದರು. ಶೋಭ ಎಂಬವರು ಮೊದಲ ಕಿಟ್ ನ್ನು ಪಡಕೊಂಡರು.
ಅಬ್ದುಲ್ ಖಾದರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮೊಯಿದೀನ್ ಮೂಡಂಬೈಲ್, ಅಬೂಬಕ್ಕರ್ ಪೋಕರ್, ಅಬ್ಬಾಸ್ ಕುಳಬೈಲ್, ಫಾರೂಕ್ ಚಿನಾಲ, ಹುಸೈನ್ ಉಸ್ತಾದ್, ಬಿ ಎಂ ಇಬ್ರಾಹಿಂ, ಹನೀಫ್ ಸಖಾಫಿ, ಮೊಹಮ್ಮದ್ ಚಿನಾಲ, ಬಿ ಎಸ್ ಮೊಹಮ್ಮದ್ ಮದನಿ, ಶಬ್ಬೀರ್ ಹರ್ಶಿದಿ ಕೆ ಸಿ ರೋಡ್, ಬಿ ಎಂ ಇಬ್ರಾಹಿಂ ಚಿಗುರುಪಾದೆ ಮೊದಲಾದವರು ಉಪಸ್ಥಿತರಿದ್ದರು.
ಸಂಜೆ ನಡೆದ ಮಹಲ್ ಸಂಗಮವನ್ನು ಆಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಮಲ್‍ಹರ್ ಉದ್ಘಾಟಿಸಿದರು. ಬಳಿಕ ನಡೆದ ಜಲಾಲಿಯ ರಾತೀಬನ್ನು ಸಿದ್ದೀಖ್ ಸಖಾಫಿ ಆವಳ ಉದ್ಘಾಟಿಸಿದರು. ಅಬ್ದುಲ್ ಖಾದರ್ ಮುಸ್ಲಿಯಾರ್ ಬಟ್ಯಪದವು ನೇತೃತ್ವ ನೀಡಿದರು. ಜಮಾಲುದ್ದೀನ್ ಜಮಲುಲ್ ಲೈಲಿ ತಂಙಳ್ ಮಲಪ್ಪುರಂ ಸಾಮಾಹಿಕ ಪ್ರಾರ್ಥಣೆಗೆ ನೇತೃತ್ವ ನೀಡಿದರು. ಕಾರ್ಯಕ್ರಮಕ್ಕೆ ಉಲಮಾ ಶಿರೋಮಣಿಗಳ ಸಹಿತ ವಿವಿಧೆಡೆಗಳಿಂದ ನೂರಾರು ಸಂಖ್ಯೆಯ ಜನರು ಪಾಲ್ಗೊಂಡರು.