ಮುಳ್ಳೇರಿಯ: ಶ್ರೀ ರಕ್ತೇಶ್ವರಿ ದೈವದ ನೇಮ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮಹೋತ್ಸವ ಕುಂಟಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ಏ.19 ಮತ್ತು 20ರಂದು ನಡೆಯಲಿದೆ.
ಏ.18ರಂದು ಶ್ರೀ ದೈವದ ಕೂಡುವಿಕೆ, ಏ.19ರಂದು ಬೆಳಿಗ್ಗೆ 10ಕ್ಕೆ ಶ್ರೀ ರಕ್ತೇಶ್ವರಿ ದೈವದ ನೇಮ, ಸಂಜೆ 7ಕ್ಕೆ ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ, ರಾತ್ರಿ 7.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ 8ಕ್ಕೆ ತೊಡಂಙಲ್, 8.30ಕ್ಕೆ ಮೇಲೆರಿಗೆ ಅಗ್ನಿ ಸ್ಪರ್ಶ, ಅನ್ನದಾನ, 8.45ಕ್ಕೆ ರಂಜಿತ್ ಪೊಸೊಳಿಗೆ ಅವರಿಂದ ಮಿಮಿಕ್ರಿ, 9ರಿಂದ ಶ್ರೀ ವಿಷ್ಣುಮೂರ್ತಿ ಕೃಪಾಶ್ರಿತ ಯಕ್ಷಗಾನ ಕಲಾ ಸಂಘದ ಮಕ್ಕಳಿಂದ ಯಕ್ಷಗಾನ ಬಯಲಾಟ, 11ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, 12ರಿಂದ ಸ್ಥಳೀಯರಿಂದ ನೃತ್ಯ ವೈವಿಧ್ಯ, ಅರ್ಪಿತಾ ಕಾಂತಡ್ಕ ಮತ್ತು ಬಳಗದವರಿಂದ ಭಕ್ತಿ ಸಂಗೀತ ನಡೆಯಲಿದೆ.
ಏ.20ರಂದು ಪ್ರಾತಃಕಾಲ 4ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ, ಪ್ರಸಾದ ವಿತರಣೆ, ಭಂಡಾರದ ನಿರ್ಗಮನ ನಡೆಯಲಿದೆ.