ಮಧೂರು: ಅರಂತೋಡು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಇತ್ತೀಚೆಗೆ ಜರಗಿತು. ಜೀರ್ಣೋದ್ಧಾರ ಕಾಮಗಾರಿಗಳನ್ನು ತ್ವರಿತಗೊಳಿಸುವಲ್ಲಿ ಊರಪರವೂರ ಭಕ್ತರ ಸಹಕಾರ ಅತೀ ಅಗತ್ಯ ಎಂದು ಅಧ್ಯಕ್ಷತೆ ವಹಿಸಿದ್ದ ವಾಸುದೇವ ಹೊಳ್ಳ ಎಲ್ಲಂಗಳ ಅವರು ಹೇಳಿದರು.
ಏ.19 ರಂದು ಶ್ರೀ ದೇವಳದಲ್ಲಿ ಅನುಜ್ಞಾಕಲಶವನ್ನು ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾಮೂಹಿಕ ಬಲಿವಾಡು ಕೂಟ, ಕಾರ್ತಿಕ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಯಿತು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣು ಭಟ್ ಕಕ್ಕೆಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಕಜಳ ವಾಸುದೇವ ಹೊಳ್ಳ ವಂದಿಸಿದರು. ಡಾ.ನಾರಾಯಣ ಅಸ್ರ, ಉಳಿಯತ್ತಾಯ ವಾಸುದೇವ ಆಸ್ರ, ಮಹಾಲಿಂಗಯ್ಯ ಕೊಲ್ಯ ಮೊದಲಾದವರು ಉಪಸ್ಥಿತರಿದ್ದರು.