ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಕುಂಬಳೆಯ ಸಮೀಪ ಆರಿಕ್ಕಾಡಿಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀವೀರಾಂಜನೇಯ ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏ.19 ರಿಂದ 25ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಏ.19 ರಂದು ಶುಕ್ರವಾರ ಬೆಳಿಗ್ಗೆ 7ಕ್ಕೆ ಕ್ಷೇತ್ರಗಳ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿವಯ್ರು ಹಾಗೂ ವೈದಿಕರ ಆಗಮನ, ವಾದ್ಯಘೋಷಗಳೊಂದಿಗೆ ಸ್ವಾಗತ, 7.30ಕ್ಕೆ ಗಣಪತಿಹವನ, ಉಗ್ರಾಣ ಭರಣ, ದೀಪ ಸ್ಥಾಪನೆ ನಡೆಯಲಿದೆ. 8.30ಕ್ಕೆ ಮರಕಡದ ಶ್ರೀಗುರು ಪರಾಶಕ್ತಿ ಮಠದ ಶ್ರೀನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರ ಆಗಮನ, ಪೂರ್ಣಕುಂಭ ಸ್ವಾಗತ, ತಂತ್ರಿವರ್ಯರಿಂದ ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 6.30ಕ್ಕೆ ಆಚಾರ್ಯವರಣ, ಪುಣ್ಯಾಹ, ಅಂಕುರಾರೋಹಣ, ಪ್ರಾಸಾದ ಶುದ್ದಿ, ವಾಸ್ತುಹೋಮ, ರಕ್ಷೋಘ್ನ ಹೋಮ, ರಾತ್ರಿ ಪೂಜೆಗಳು ನಡೆಯಲಿದೆ.
ಬ್ರಹ್ಮಕಲಶೋತ್ಸವ ಆರಂಭದ ಸುಸಂದರ್ಭದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಸಭಾಂಗಣದಲ್ಲಿ ಅಖಿಲ ಭಾರತ ರಾಮ ಕ್ಷತ್ರಿಯರ ಸಮಾವೇಶ-2019 ನಡೆಯಲಿದೆ. ಬೆಳಿಗ್ಗೆ 6.30ರಿಂದ 9.30ರ ತನಕ ರಾಮರಾಜ ಕ್ಷತ್ರಿಯ, ರಾಮ ಕ್ಷತ್ರಿಯ ಸಮಾಜದ ವಿವಿಧ ಮಹಿಳಾ ಭಜನಾ ತಂಡಗಳಿಂದ ಸಮೂಹ ದಾಸ ಸಂಕೀರ್ತನಾ ಗಾಯನ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಮರಕಡದ ಶ್ರೀಗುರು ಪರಾಶಕ್ತಿ ಮಠದ ಶ್ರೀನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಮಾವೇಶದ ಉದ್ಘಾಟನೆಯು ನಡೆಯಲಿದ್ದು, ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ಆರಿಕ್ಕಾಡಿ ಕೋಟೆ ಸ್ಮರಣ ಸಂಚಿಕೆ ಬಿಡುಗಡೆ ಈ ಸಂದರ್ಭ ನಡೆಯಲಿದೆ. ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿ, ಶೃಂಗೇರಿ ಶಂಕರ ಮಠದ ಕೋಟೆಕಾರು ಶಾಖಾ ಪ್ರಾಂತೀಯ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ, ಬೇಕಲ ಶಾರದಾಂಬಾ ದೇವಸ್ಥಾನದ ಬ್ರಹ್ಮಶ್ರೀ ಉಡುಪಿ ಮಾಧವ ಭಟ್, ಮಂಗಳೂರು ರಾಧಾಕೃಷ್ಣ ದೇವಾಲಯದ ವಿದ್ವಾನ್, ಡಾ.ಸತ್ಯಕೃಷ್ಣ ಭಟ್ ಉಪಸ್ಥಿತರಿದ್ದು ಮಾತನಾಡುವರು. ಸಂಜೆ 6.30 ಕ್ಕೆ ಮುಳ್ಳೇರಿಯದ ಸುರೇಶ್ ಯಾದವ್ ಜಯನಗರ ಅವರಿಂದ ಮಿಮಿಕ್ರಿ ಪ್ರದರ್ಶನ ನಡೆಯಲಿದೆ.
ಏ.20 ರಂದು ಬೆಳಿಗ್ಗೆ ಗಣಪತಿಹೋಮ, ಉಷಃ ಪೂಜೆ, ಅಂಕುರಪೂಜೆ, ಚತುಃಶುದ್ದಿದಾರಾ ಪಮಚಕಂ, ಪಂಚಗವ್ಯಂ, ಮಧ್ಯಾಹ್ನ ಮಹಾಪೂಜೆ, ಮಧ್ಯಾಹ್ನ 1 ರಿಂದ ಅನ್ನ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ಅಂಕುರಪೂಜೆ ನಡೆಯಲಿದೆ.
ಸಂಜೆ 5.ರಿಂದ ನಡೆಯುವ ಧಾರ್ಮಿಕ ಸಭೆಯಲ್ಲಿ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸುವರು. ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಆಶೀರ್ವಚನ ನೀಡುವರು.ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಕಾಸರಗೋಡಿನ ಕನ್ನಡ ಗ್ರಾಮದ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕೂಚುಪುಡಿ ನೃತ್ಯ, ಭರತನಾಟ್ಯ, ಜಾನಪದ ನೃತ್ಯಗಳು, ಗಾನ-ಗಾಯನ ನಡೆಯಲಿದೆ. ರಾತ್ರಿ 8ರ ಬಳಿಕ ಕಿರಣ್ ಕಲಾಂಜಲಿ ನಿರ್ದೆಶನದ ಶ್ರೀಪಥ ಕನ್ನಡ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ.