ಪೆರ್ಲ:ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿ ಹಾಗೂ ಸಮಾನ ಮನಸ್ಕರ ಆಶ್ರಯದಲ್ಲಿ ಮೇ.1ರಂದು ಸಂಜೆ 4ಗಂಟೆಗೆ ಸ್ವರ್ಗ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ 'ಜಲ ಜಾಗೃತಿ ಚಿಂತನೆ' ಕಾರ್ಯಕ್ರಮ ನಡೆಯಲಿದೆ.
ಅನಿಯಮಿತ ನೀರಿನ ಬಳಕೆ, ಕೃಷಿ ಬಳಕೆಗೆ ಉಚಿತ ವಿದ್ಯುತ್ ಕಾರಣದಿಂದ ಅತಿ ಪಂಪಿಗ್, ಕೊಳವೆ ಬಾವಿಗಳ ಹೆಚ್ಚಳ, ಕಾಡು ಸಸ್ಯಾವರಣಗಳ ನಾಶ ಮೊದಲಾದ ಕಾರಣಗಳಿಂದ ಆಸುಪಾಸು ಜಲಮೂಲಗಳೆಲ್ಲವೂ ಬತ್ತಿದ್ದು ನೀರಿನ ಅಭೂತಪೂರ್ವ ಕ್ಷಾಮ ಉಂಟಾಗಿದ್ದು ನೀರು ಬಳಕೆಯಲ್ಲಿ ಸ್ವನಿಯಂತ್ರಣ, ಜಲಜಾಗೃತಿ, ಕಿ.ಮೀ.ಉದ್ದಕ್ಕೆ ಚಾಚಿರುವ ಜಲಾನಯನ ಪ್ರದೇಶಗಳ ಇಕ್ಕೆಲಗಳಲ್ಲಿ ಮಳೆ ನೀರು ಇಂಗಿಸುವ ಸಾಮೂಹಿಕ ಪ್ರಯತ್ನ ನಡೆಯಬೇಕಾಗಿದೆ. ಸಂಪನ್ಮೂಲ ವ್ಯಕ್ತಿಯಾಗಿ ಜಲತಜ್ಞ ಶ್ರೀಪಡ್ರೆ ಮಾಹಿತಿ ನೀಡಲಿದ್ದು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.