HEALTH TIPS

ಲೋಕಸಭಾ ಚುನಾವಣೆ: 2ನೇ ಹಂತದಲ್ಲಿ ಕರ್ನಾಟಕ ಸಹಿತ 11 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಇಂದು ಮತದಾನ

     ನವದೆಹಲಿ: ಕರ್ನಾಟಕ ಸಹಿತ 11 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ 95 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಆಶರಂಭಗೊಂಡಿದೆ.
          ಅಸ್ಸಾಂ, ಬಿಹಾರದಲ್ಲಿ ತಲಾ 5, ಛತ್ತೀಸ್ ಗಢ 3,  ಜಮ್ಮು- ಕಾಶ್ಮೀರ 2, ಕರ್ನಾಟಕ 14, ಮಹಾರಾಷ್ಟ್ರ 10, ಮಣಿಪುರ 1, ಒಡಿಶಾ ಐದು, ತಮಿಳುನಾಡು 38, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳ 3 ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
    ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಹಣ, ಮದ್ಯದ ಹೊಳೆಯಿಂದಾಗಿ ಚುನಾವಣೆಯನ್ನು ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಂದೂಡಿದ್ದಾರೆ. ವೆಲ್ಲೂರಿನಲ್ಲೂ ಇಂದು  ಚುನಾವಣೆ ನಿಗದಿಯಾಗಿತ್ತು.
   ಇಂದಿನ ಚುನಾವಣೆಯಲ್ಲಿ ಕರ್ನಾಟಕದ  2 ಕೋಟಿ 63 ಲಕ್ಷದ 38 ಸಾವಿರದ 227 ಮತದಾರರ ಮತ ಚಲಾಯಿಸಲಿದ್ದು, ಒಟ್ಟು 30 ಸಾವಿರದ 410 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 241 ಅಭ್ಯರ್ಥಿಗಳಲ್ಲಿ 17 ಮಂದಿ ಮಹಿಳೆಯರಿದ್ದು, ಇವರ ರಾಜಕೀಯ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.
    ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಬಿಜೆಪಿಯ ಜಿ.ಎಸ್. ಬಸವರಾಜು ಪ್ರಬಲ ಎದುರಾಳಿಯಾಗಿದ್ದರೆ ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರಬಲ ಎದುರಾಳಿಯಾಗಿ ಗಮನ ಸೆಳೆದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries