ಪೆರ್ಲ: ಕಾಸರಗೋಡು ಸಣ್ಣಕೂಡ್ಲು ಕೆಳಗಿನ ಮನೆ ಶ್ರೀ ಧೂಮಾವತೀ ರಾಜರಾಜೇಶ್ವರೀ ದೈವಸ್ಥಾನದಲ್ಲಿ ಪೆರ್ಲ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಮಕ್ಕಳ ಮೇಳದವರಿಂದ ಶ್ರೀ ದೇವಿ ಕಾರುಣ್ಯ ಯಕ್ಷಗಾನ ಬಯಲಾಟ ಎ.20 ರಂದು ರಾತ್ರಿ 9.30 ರಿಂದ ಪ್ರದರ್ಶನಗೊಳ್ಳಲಿದೆ.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಬ್ಬಣಕೋಡಿ ರಾಮ ಭಟ್ ಅವರ ದಕ್ಷ ನಿರ್ದೇಶನವಿದ್ದು, ಅತಿಥಿ ಕಲಾವಿದರಾಗಿ ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ ಹಾಗು ಹರೀಶ್ ಮುಳ್ಳೇರಿಯ ಭಾಗವಹಿಸಲಿದ್ದಾರೆ. ಕಟೀಲು, ಹನುಮಗಿರಿ ಹಾಗು ಎಡನೀರು ಮೇಳದ ಯುವ ಕಲಾವಿದರ ಸಮಾಗಮವಿದೆ.