HEALTH TIPS

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವಿಷು ವಿಶೇಷ ಸ್ಪರ್ಧೆ 2019 ಫಲಿತಾಂಶ ಪ್ರಕಟ

     
      ಕುಂಬಳೆ: ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ). ಸಂಸ್ಥೆಯು ಹಲವಾರು ಕಾರ್ಯಗಳನ್ನು ನಡೆಸುತ್ತಿದೆ. ಈ ಸೌರ ಯುಗಾದಿ "ವಿಷು"ವಿನ ಪರ್ವಕಾಲದಲ್ಲಿ ನಡೆಸಿದ ``ವಿಷು ವಿಶೇಷ ಸ್ಪರ್ಧೆ - 2019'' ಅತ್ಯಂತ ಯಶಸ್ವಿಯಾಗಿ ನಡೆದಿದೆ. ಕತೆ, ಕವನ, ಲಘುಬರಹ, ಫೊಟೋಗ್ರಫಿ ಹೀಗೆ ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಗಳಿಗೆ ಅಂಚೆ ಹಾಗೂ ಮಿಂಚಂಚೆ(ಇmಚಿiಟ) ಮೂಲಕ ನೂರಾರು ಮಂದಿ ಭಾಗವಹಿಸಿದ್ದರು.
     ಸ್ಪರ್ಧೆಗಳ ಮೌಲ್ಯಮಾಪನವನ್ನು ಡಾ. ಹರಿಕೃಷ್ಣ ಭರಣ್ಯ, ಶಿವಸುಬ್ರಹ್ಮಣ್ಯ , ಪುಂಡಿಕಾಯಿ ನಾರಾಯಣ ಭಟ್, ಇಂದಿರಾ ಜಾನಕಿ ಮತ್ತು ಒಪ್ಪಣ್ಣ ಬಳಗದ ಹತ್ತು ಹಿರಿಯರು ನಡೆಸಿಕೊಟ್ಟರು. ಒಪ್ಪಣ್ಣ ಬಳಗದ ಸದಸ್ಯರಾದ ರಘುರಾಮ ಮುಳಿಯ ಇವರು ಸ್ಪರ್ಧಾ ಸಂಯೋಜಕರಾಗಿದ್ದರು.
ಸಂ ಸ್ಪರ್ಧೆ ಪ್ರಥಮ ದ್ವಿತೀಯ
1 ಕಥೆ- ಶ್ರೀಮತಿ ಸುಶೀಲ ಕೆ. ಪದ್ಯಾಣ (ಪ್ರಥಮ), ಶ್ರೀಮತಿ ವಿಂಧ್ಯಾ ಪ್ರಸಾದ್(ದ್ವಿತೀಯ)
2 ಲಘು ಬರಹ - ವಿ. ಬಿ. ಕುಳಮರ್ವ ಕುಂಬಳೆ(ಪ್ರಥಮ), - ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆ(ದ್ವಿತೀಯ)
ಶ್ರೀಮತಿ ಸಂಧ್ಯಾ ಶ್ಯಾಮ ಭಟ್, ಕೊಳ್ನಾಡು(ದ್ವಿತೀಯ)
3 ಕವನ-   ಗೋಪಾಲ ಬೊಳುಂಬು(ಪ್ರಥಮ)-  ಬಾಲ ಮಧುರಕಾನನ(ದ್ವಿತೀಯ),
ಶ್ರೀಮತಿ ಸರಸ.ಬಿ.ಕೃಷ್ಣ(ದ್ವಿತೀಯ)
4 ಫೋಟೋ- ಪಟಿಕ್ಕಲ್ಲು ಶಂಕರ ಭಟ್(ಪ್ರಥಮ)-  ಶಿವರಾಜ್ ಪೆರ್ಮುಖ(ದ್ವಿತೀಯ)
5 ವಿಶೇಷ ಪ್ರೋತ್ಸಾಹಕ- ಆತ್ರೇಯ ನಾರಾಯಣ ಭಟ್.ಜೆ,  ಶ್ರೀಮತಿ ರಾಜಶ್ರೀ ರೈ ಪೆರ್ಲ,
ಶ್ರೀಮತಿ ಪ್ರೇಮಲತಾ ಹಳೆಮನೆ ಪುಣೆ, ಶ್ರೀಮತಿ ಭಾರತಿ ಕೊಲ್ಲರಮಜಲು
     ಸ್ಪರ್ಧೆಯ ವಿಜೇತರಿಗೆ ಮೇ. 5 ರಂದು ಪುತ್ತೂರು - ಕಾವು ಜನಮಂಗಲ ಸಭಾಭವನದಲ್ಲಿ ಅಪರಾಹ್ನ 2 ಘಂಟೆಗೆ ನಡೆಯುವ ಪ್ರತಿಷ್ಠಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬಹುಮಾನ ವಿತರಿಸಿ ಗೌರವಿಸಲಾಗುವುದು. ಅದೇ ದಿನ ಮುಕ್ತ ಆಶುಭಾಷಣ ಸ್ಪರ್ಧೆಯೂ ನಡೆಯಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries