HEALTH TIPS

ಏ.21-22 :ಮಾಣಿಮೂಲೆ- ವಾರ್ಷಿಕೋತ್ಸವ ಮತ್ತು ಧರ್ಮನೇಮ

     ಬದಿಯಡ್ಕ: ಮಾಣಿಮೂಲೆ ಶ್ರೀ ಧೂಮಾವತೀ ದೈವಸ್ಥಾನ ಹಾಗೂ ಉಪದೈವಗಳ 17 ನೇ ವಾರ್ಷಿಕೋತ್ಸವ ಮತ್ತು ಧರ್ಮನೇಮ ಏ.21 ಮತ್ತು 22 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
   ಏ.21 ರಂದು ಬೆಳಿಗ್ಗೆ ಗಣಪತಿ ಹೋಮ, 10 ಕ್ಕೆ ನಾಗತಂಬಿಲ, 11 ಕ್ಕೆ ಹರಿಸೇವೆ, ಮಧ್ಯಾಹ್ನ 1 ಕ್ಕೆ ಅನ್ನದಾನ, 3 ಕ್ಕೆ ಕುರುವ ಗುಳಿಗನ ಕೋಲ, ಕೊರತಿ ಕೋಲ, ಸ್ಥಳ ಗುಳಿಗನ ಕೋಲ, ಸಂಜೆ 7 ಕ್ಕೆ ಭಂಡಾರ ಇಳಿಯುವುದು, ರಾತ್ರಿ 8 ಕ್ಕೆ ಕಲ್ಲಾಳ್ತ ಗುಳಿಗನ ಕೋಲ ಮತ್ತು ಗುರುಹಿರಿಯರಿಗೆ ಬಡಿಸುವುದು, 10 ಕ್ಕೆ ಅನ್ನದಾನ, 11 ಕ್ಕೆ ಪಂಜುರ್ಲಿ ಮತ್ತು ಮೂಕಾಂಬಿಕಾ ಗುಳಿಗನ ಕೋಲ, ಮಧ್ಯರಾತ್ರಿ 2 ಕ್ಕೆ ಮೂಕಾಂಬಿಕಾ ಗುಳಿಗನ ಅಗ್ನಿಪ್ರವೇಶ, 22 ರಂದು ಬೆಳಗ್ಗೆ 6 ಕ್ಕೆ ಪಂಜುರ್ಲಿ ಮತ್ತು ಮೂಕಾಂಬಿಕಾ ಗುಳಿಗನ ಪ್ರಸಾದ ವಿತರಣೆ, 11 ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries