ಮಂಜೇಶ್ವರ: ವಿದ್ಯಾವರ್ಧಕ ಹೈಸ್ಕೂಲ್ ಮೀಯಪದವಿನ ನಿವೃತ್ತ ಅಧ್ಯಾಪಕ ವೆಂಕಟರಮಣ ಭಟ್ ರಚಿಸಿದ ಹೊಸಚಿಗುರು ಕವನ ಸಂಕಲನವನ್ನು ಚಿಗುರುಪಾದೆ ಶ್ರೀ ನಿಲಯದಲ್ಲಿ ಏ. 21 ರಂದು ಭಾನುವಾರ ಬೆಳಿಗ್ಗೆ 11 ರಿಂದ ಬಿಡುಗಡೆಗೊಳ್ಳಲಿದೆ.
ಪ್ರೇಮಾ ಕೆ ಭಟ್ ತೊಟ್ಟೆತ್ತೋಡಿ ಕವನ ಸಂಕಲನವನ್ನು ಬಿಡುಗಡೆಗೊಳಿಸುವರು. ವೇದಿಕೆಯಲ್ಲಿ ಮಂಗಳೂರು ಬಾನುಲಿ ನಿಲಯದ ನಿವೃತ್ತ ನಿಲಯ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ, ಗೋಪಾಲ ಭಟ್ ಸಿ.ಹೆಚ್., ಡಾ. ಸುರೇಶ ನೆಗಳಗುಳಿ, ಗಣೇಶ ಪ್ರಸಾದ ಪಾಂಡೇಲು, ಗುಣಾಜೆ ರಾಮಚಂದ್ರ ಭಟ್, ಹರೀಶ್ ಸುಲಾಯ ಒಡ್ಡಂಬೆಟ್ಟು, ಯೋಗೀಶ್ ರಾವ್ ಚಿಗುರುಪಾದೆ ಮೊದಲಾದ ಕವಿಗಳು ಉಪಸ್ಥಿತರಿರುವರು. ಉದಯೋನ್ಮುಖ ಕವಿ-ಕವಿಯತ್ರಿಗಳು ಕವನ ವಾಚನ ಮಾಡಲಿದ್ದಾರೆ.