ಮುಂಬೈ: ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‍ವರ್ಕ್ ಜಿಯೋ ತನ್ನ ವಿಶಿಷ್ಟ ರೆಡ್‍ಮಿ ಗೋ ಕೊಡುಗೆಯೊಡನೆ ಮತ್ತೊಂದು ಆಕರ್ಷಕ ಡಿಜಿಟಲ್ ಲೈಫ್ ಕೊಡುಗೆಯನ್ನು ಗ್ರಾಹಕರಿಗೆ ಪರಿಚಯಿಸಿದೆ.
#ಆಫ್ ಕಿ ನಯಿ ದುನಿಯಾ# ಎಂದು ಇತ್ತೀಚೆಗೆ ಪರಿಚಯಿಸಲಾದ, ಕೈಗೆಟುಕುವ ಬೆಲೆಯ ಸ್ಮಾರ್ಟ್‍ಫೋನ್ ಶಿಯೋಮಿ ರೆಡ್‍ಮಿ ಗೋ ಬಳಕೆದಾರರಿಗೆ ಜಿಯೋದಿಂದ ಆಕರ್ಷಕ ಕ್ಯಾಶ್‍ಬ್ಯಾಕ್ ಹಾಗೂ ಹೆಚ್ಚುವರಿ ಡೇಟಾ ಕೊಡುಗೆ ದೊರಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೈಗೆಟುಕುವ ಬೆಲೆಯ ಸ್ಮಾರ್ಟ್‍ಫೋನ್‍ನೊಂದಿಗೆ ಡಿಜಿಟಲ್ ಜೀವನದ ಅನುಭವ ಪಡೆಯಲು ಅಪೇಕ್ಷಿಸುವ ಲಕ್ಷಾಂತರ ಭಾರತೀಯರಿಗೆ ಅತ್ಯುತ್ತಮ ಮೌಲ್ಯ ನೀಡುವ ಉದ್ದೇಶದಿಂದ ಜಿಯೋ-ರೆಡ್‍ಮಿ ಗೋ ಕೊಡುಗೆಯನ್ನು ರೂಪಿಸಲಾಗಿದೆ. ಈ ಕೊಡುಗೆಯು ರೆಡ್‍ಮಿ ಗೋ ಗ್ರಾಹಕರಿಗೆ ರೂ. 2200 ವಿಶೇಷ ಕ್ಯಾಶ್‍ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ ನೀಡಲಿದೆ. ರೆಡ್‍ಮಿ ಗೋ ಮಾರ್ಚ್ 22ರಿಂದ ದೇಶಾದ್ಯಂತ ಮಾರಾಟಕ್ಕೆ ಲಭ್ಯವಾಗಿದೆ.
ಜಿಯೋ-ರೆಡ್‍ಮಿ ಗೋ ಕೊಡುಗೆ:
ಶಿಯೋಮಿ ರೆಡ್‍ಮಿ ಗೋ ಸಾಧನಗಳಿಗೆ ಜಿಯೋ ಅನನ್ಯ ಪಾಲುದಾರ ಸಂಸ್ಥೆಯಾಗಿದ್ದು, ಈ ಕೊಡುಗೆಯು ಡಿಜಿಟಲ್ ಜೀವನಶೈಲಿಯನ್ನು ಎಲ್ಲ ಭಾರತೀಯರಿಗೂ ತಲುಪಿಸಲಿದೆ. ಶಿಯೋಮಿ ರೆಡ್‍ಮಿ ಗೋ ಸಾಧನದ ಮೇಲೆ ನೀಡಲಾಗುವ ರೂ. 2200 ತಕ್ಷಣದ ಕ್ಯಾಶ್‍ಬ್ಯಾಕ್ ಹಾಗೂ 100 ಜಿಬಿ ಹೆಚ್ಚುವರಿ ಡೇಟಾ 198 ರೂ. ಹಾಗೂ 299 ರೂ. ರೀಚಾರ್ಜ್‍ಗಳಿಗೆ ಅನ್ವಯಿಸಲಿದೆ.
ಮೈಜಿಯೋ ಆಪ್‍ನಲ್ಲಿ ತಲಾ 50 ರೂ. ಮೌಲ್ಯದ 44 ರಿಯಾಯಿತಿ ಕೂಪನ್ನುಗಳ ರೂಪದಲ್ಲಿ 2200 ರೂ. ಕ್ಯಾಶ್‍ಬ್ಯಾಕ್ ಅನ್ನು ಅರ್ಹ ಗ್ರಾಹಕರಿಗೆ ನೀಡಲಾಗುವುದು. ಈ ವೋಚರುಗಳನ್ನು ಆಮೇಲಿನ 198 ರೂ. ಹಾಗೂ 299 ರೂ. ರೀಚಾರ್ಜ್ ಗಳ ಮೇಲೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಆಮೇಲಿನ ರೀಚಾರ್ಜ್ ಗಳಲ್ಲಿ ಕ್ಯಾಶ್‍ಬ್ಯಾಕ್ ವೋಚರ್ ಬಳಸುವ ಮೂಲಕ 198 ರೂ. ರೀಚಾರ್ಜ್ 148 ರೂ. ದೊರಕಲಿದೆ. ಇದೇ ರೀತಿ, ಗ್ರಾಹಕರು 299 ರೂ. ರೀಚಾರ್ಜ್ ಅನ್ನು ವಾಸ್ತವಿಕವಾಗಿ 249 ರೂ. ಪಡೆದುಕೊಳ್ಳಬಹುದು.
100 ಜಿಬಿ ಹೆಚ್ಚುವರಿ ಡೇಟಾವನ್ನು ಗ್ರಾಹಕರು ತಲಾ 10 ಜಿಬಿಯ ಹೆಚ್ಚುವರಿ ಡೇಟಾ ಕೂಪನ್ನುಗಳ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇವುಗಳನ್ನು ವಾಯಿದೆಯ ಅವಧಿಯಲ್ಲಿ ಗರಿಷ್ಠ ಹತ್ತು (10) ಆಮೇಲಿನ ರೀಚಾರ್ಜುಗಳನ್ನು ಮಾಡಿದಾಗ ಬಳಸಿಕೊಳ್ಳಬಹುದು.
ನೆಟ್‍ವರ್ಕ್ ಅನುಕೂಲತೆ:
ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‍ವರ್ಕ್ ಆದ ಜಿಯೋ, ಭಾರತ ಹಾಗೂ ಭಾರತೀಯರಿಗಾಗಿ ಹಲವು ಗಮನಾರ್ಹ ಬದಲಾವಣೆಗಳನ್ನು ತಂದಿದೆ. ಪ್ರಪಂಚದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‍ವರ್ಕ್ ಆಗಿರುವುದಷ್ಟೇ ಅಲ್ಲದೆ, ದೇಶದ ಅತಿವೇಗದ ನೆಟ್‍ವರ್ಕ್ ಎಂಬ ಹೆಗ್ಗಳಿಕೆಯನ್ನೂ ಜಿಯೋ ಸ್ಥಿರವಾಗಿ ಪಡೆಯುತ್ತ ಬಂದಿದೆ.
ಜಿಯೋ ಜಾಲದ ಆಧುನಿಕ ತಂತ್ರಜ್ಞಾನ, ಅತಿವೇಗದ ಡೇಟಾ, ಉಚಿತ ಎಚ್‍ಡಿ ವಾಯ್ಸ್ ಹಾಗೂ ಪ್ರೀಮಿಯಂ ಕಂಟೆಂಟ್‍ಗಳ ಮೂಲಕ ರೆಡ್‍ಮಿ ಗೋ ತನ್ನ ಬಳಕೆದಾರರಿಗೆ ತೊಡಕಿಲ್ಲದ ಅತಿವೇಗದ ಡೇಟಾ ಅನುಭವವನ್ನು ನೀಡಲಿದೆ. ದೇಶವ್ಯಾಪಿ 4ಜಿ ಡೇಟಾ ಹಾಗೂ ವಾಯ್ಸ್ ಸೇವೆಗಳ (ಪೋಲ್ಟೇ) ಸರಿಸಾಟಿಯಿಲ್ಲದ ಅನುಭವವನ್ನು ನೀಡುವ ಏಕೈಕ ಜಾಲ ಜಿಯೋ ಆಗಿದೆ.