ಯುಪಿಎಸ್ ಸಿ ಫಲಿತಾಂಶ ಪ್ರಕಟ: ಐಐಟಿ ಬಾಂಬೆ ಇಂಜಿನಿಯರ್ ಟಾಪರ್, 24 ಕನ್ನಡಿಗರು ತೇರ್ಗಡೆ
0
ಏಪ್ರಿಲ್ 05, 2019
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2018ನೇ ಸಾಲಿನ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಿಸಿದ್ದು, ಐಐಟಿ ಬಾಂಬೆ ಇಂಜಿನಿಯರ್ ಕನಿಷ್ಕ್ ಕಟಾರಿಯಾ ಅವರು ಪ್ರಥಮ ಯಾರ್ಂಕ್ ಪಡೆದಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿರುವ ಕಟಾರಿಯಾ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಗಣಿತವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪ್ರಥಮ ಯಾರ್ಂಕ್ ಗಳಿಸಿದ್ದಾರೆ.
ಐದನೇ ಯಾರ್ಂಕ್ ಪಡೆದಿರುವ ಸೃಷ್ಠಿ ಜಯಂತ್ ದೇಶಮುಖ್ ಅವರು ಮಹಿಳಾ ಅಭ್ಯರ್ಥಿಗಳಲ್ಲಿ ಪ್ರಥಮರಾಗಿದ್ದಾರೆ. ಬಿ.ಇ.(ಕೆಮಿಕಲ್? ಇಂಜಿನಿಯರ್?) ಪದವೀಧರೆಯಾಗಿರುವ ದೇಶಮುಖ್, ಭೂಪಾಲ್?ನ ರಾಜೀವ್ ಗಾಂಧಿ ಪ್ರೌದ್ಯೋಗಿಕ ವಿಶ್ವವಿದ್ಯಾಲಯ ವಿದ್ಯಾರ್ಥಿಯಾಗಿದ್ದಾರೆ
17ನೇ ರ್ಯಾಂಕ್? ಪಡೆದ? ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ್ ಸೇರಿದಂತೆ ರಾಜ್ಯದ 24 ಅಭ್ಯರ್ಥಿಗಳು ನಾಗರಿಕ ಸೇವೆಗೆ ಅರ್ಹತೆ ಪಡೆದಿದ್ದಾರೆ.
ಒಟ್ಟು 25 ಅಭ್ಯರ್ಥಿಗಳ ಟಾಪರ್ಸ್ ಪಟ್ಟಿಯಲ್ಲಿ 15 ಪುರುಷ ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್?ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳನ್ನು ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್? ಸೇವೆ ಮತ್ತು ಕೇಂದ್ರ ಸೇವೆಯ ಗ್ರೂಪ್? ಎ ಹಾಗೂ ಬಿ ಹುದ್ದೆಗಳಿಗೆ ಶಿಫಾರಸು ಮಾಡಲಾಗಿದೆ.
ನಾಗರಿಕ ಸೇವೆ ಪೂರ್ವಭಾವಿ ಪರೀಕ್ಷೆಯನ್ನು ಜೂನ್? ತಿಂಗಳಿನಲ್ಲಿ ನಡೆಸಲಾಗಿತ್ತು. ಸುಮಾರು 10 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 5 ಲಕ್ಷ ಜನರು ಮಾತ್ರ ಪರೀಕ್ಷೆಯನ್ನು ಎದುರಿಸಿದ್ದರು. ಇವರಲ್ಲಿ 10,468 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆಯನ್ನು ಪಡೆದಿದ್ದರು. ಮುಖ್ಯ ಪರೀಕ್ಷೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್? 2018 ರಲ್ಲಿ ನಡೆದಿತ್ತು.