ಬದಿಯಡ್ಕ: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇದರ ಆಶ್ರಯದಲ್ಲಿ ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರ ಕನ್ನಡ ಕಥಾ ಸಂಕಲನ `ತಲ್ಲಣಗಳ ಪಲ್ಲವಿ' ಕೃತಿ ಏ.24 ರಂದು ಎಡನೀರಿನಲ್ಲಿ ಸಂಜೆ 6.30 ಕ್ಕೆ ಬಿಡುಗಡೆಗೊಳ್ಳಲಿದೆ.
ಎಡನೀರು ಮಠಾಧೀಶ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಕೃತಿ ಬಿಡುಗಡೆಗೊಳಿಸುವರು. ಡಾ.ರತ್ನಾಕರ ಮಲ್ಲಮೂಲೆ ಅವರು ಕೃತಿಯನ್ನು ಪರಿಚಯಿಸುವರು.
ಆ ಬಳಿಕ ರಾತ್ರಿ 7.30 ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಅವರಿಂದ `ಕೀಚಕ ವಧೆ' ಯಕ್ಷಗಾನ ಬಯಲಾಟ ಜರಗಲಿದೆ.