ನವದೆಹಲಿ: ಜನಪ್ರಿಯ ಎಡಿಟಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ನಿಷೇಧದ ಕುರಿತಂತೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಏಪ್ರಿಲ್ 24ಕ್ಕೆಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥಪಡಿಸುವಂತೆ ಮದ್ರಾಸ್ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಒಂದು ವೇಳೆ ನಿಗದಿತ ಅವಧಿಯೊಳಗೆ ಮದ್ರಾಸ್ ಹೈಕೋರ್ಟ್ ಟಿಕ್ ಟಾಕ್ ಕುರಿತ ಅರ್ಜಿಯನ್ನು ತೀರ್ಮಾನಿಸುವಲ್ಲಿ ವಿಫಲವಾದರೆ ಆಗ ಅಪ್ಲಿಕೇಷನ್ ವಿರುದ್ಧದ ನಿಷೇಧದ ಆದೇಶ ತೆರವಾಗಲಿದೆ ಎಂದು ಹೇಳಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಅಲ್ಲದೆ ಅಶ್ಲೀಲ ವಿಚಾರಗಳ ಹರಿದಾಡುವಿಕೆ ಸಂಬಧಆತಂಕಕ್ಕೆ ಕಾರಣವಾಗಿರುವ ಟಿಕ್ ಟಾಕ್ ಅಪ್ಲಿಕೇಷನ್ ನಿಷೇಧ ಮಾಡಿ ಎಂದು ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.