ಕುಂಬಳೆ: ಚನ್ನಿಕುಡೇಲು ತರವಾಡಿನ ಕುಲಾಲ್ ಉಪ್ಯಾನ್ ಕುಟುಂಬಸ್ಥರ ಮೂಲಸ್ಥಾನ ಶ್ರೀ ನಾಗಬ್ರಹ್ಮ, ಮಲರಾಯ ಮತ್ತು ಪರಿವಾರ ದೈವಗಳ ವರ್ಷಾವಧಿ ತಂಬಿಲ ಮತ್ತು ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ ಏ.25 ರಂದು ಜರಗಲಿದೆ.
ಏ.25 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ವೆಂಕಟರಮಣ ದೇವರ ಮುಡಿಪು ಪೂಜೆ, 11 ಗಂಟೆಗೆ ಧರ್ಮದೈವ ಶ್ರೀ ಮಲರಾಯಿಗೆ ತಂಬಿಲ ಸೇವೆ ನಡೆಯಲಿದೆ. 11.30ಕ್ಕೆ ಶ್ರೀ ನಾಗಬ್ರಹ್ಮ, ಮಲರಾಯ ಮತ್ತು ಪರಿವಾರ ದೈವಗಳ ಮೂಲಸ್ಥಾನ ಸಮಿತಿ ಚನ್ನಿಕುಡೇಲು ತರವಾಡಿನ ಅಧ್ಯಕ್ಷ ಚೆನ್ನಪ್ಪ ಕುಲಾಲ್ ಎರುಗಲ್ಲು ಅವರ ಅಧ್ಯಕ್ಷತೆಯಲ್ಲಿ, ಬ್ರಹ್ಮಶ್ರೀ ತಂತ್ರಿ ಉರ್ಮಿ ವಾಸುದೇವ ನಲ್ಲೂರಾಯ ಅವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ.
ಶ್ರೀಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಇದೇ ವೇಳೆಯಲ್ಲಿ 2017-18 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದ ತರವಾಡಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ತರವಾಡಿನ ಕುಟುಂಬಸ್ಥರಲ್ಲಿ ಅಶಕ್ತರಾದ, ಅನಾರೋಗ್ಯ ಬಾಧಿಸಿದ ವ್ಯಕ್ತಿಗಳಿಗೆ ಸಾಂತ್ವನ ನಿಧಿ ಸಮರ್ಪಣೆ ಜರಗಲಿದೆ. ಚನ್ನಿಕುಡೇಲು ತರವಾಡಿನ ಹಿರಿಯರು ಉಪಸ್ಥಿತರಿರುವರು.
ಮಾಧ್ಯಾಹ್ನ 1 ಗಂಟೆಗೆ ಪ್ರಸಾದ ಭೋಜನ, ಸಂಜೆ 7 ಗಂಟೆಗೆ ಪರಿವಾರ ದೈವಗಳ ತಂಬಿಲ ಪ್ರಾರಂಭವಾಗಲಿದೆ.