ಉಪ್ಪಳ: ಬಾಯಾರು ಬದಿಯಾರಿನ ಶ್ರೀ ಮಲರಾಯ ದೈವಗಳ ನೂತನ ಧ್ವಜಸ್ತಂಭದ ಪೀಠಪ್ರತಿಷ್ಠೆ, ನೂತನ ಧ್ವಜ, ಧ್ವಜಸ್ತಂಭ ಹಾಗೂ ವಾಹನಗಳ ಪರಿಗ್ರಹ ಮತ್ತು ಬಾಯಾರು ಜಾತ್ರೋತ್ಸವ ಏ. 25 ರಿಂದ 30 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಏ.25 ರಂದು ಗುರುವಾರ ಸಂಜೆ 5. ಕ್ಕೆ ತಂತ್ರಿಗಳ ಆಗಮನ, ನೂತನ ಧ್ವಜಸ್ತಂಭ, ನೂತನ ಧ್ವಜ,ದೈವಗಳ ವಾಹನ(ಹುಲಿ,ಹಂದಿ) ಪರಿಗ್ರಹದ ಕಾರ್ಯಕ್ರಮಗಳು ನಡೆಯಲಿವೆ. ಏ. 26 ರಂದು ಶುಕ್ರವಾರ ವೈದಿಕ ಕಾರ್ಯಕ್ರಮ ಹಾಗೂ 11.36 ಕರ್ಕಾಟಕ ಲಗ್ನದಲ್ಲಿ ಪ್ರತಿಷ್ಠೆ ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಭಂಡಾರ ಇಳಿದು ಧ್ವಜಾರೋಹಣ ನಡೆಯಲಿದೆ.
ಏ.27 ರಂದು ಶನಿವಾರ ಕೊಟ್ಯದಾಯನ, ಏ28 ರಂದು ಭಾನುವಾರ ಅಪರಾಹ್ನ 4 ಗಂಟೆಗೆ ಅಯ್ಯರ ಬಂಟರ ನೇಮ ಹಾಗೂ ಪ್ರಥಮ ಬಂಡಿ ಉತ್ಸವ, ಏ.29 ರಂದು ಸೋಮವಾರ ಮಲರಾಯ ನೇಮ, ನಡುಬಂಡಿ ಉತ್ಸವ, ಏ.30 ರಮದು ಮಂಗಳವಾರ ಪಿಲಿಚಾಮುಂಡಿ ನೇಮ ಹಾಗೂ ಕಡೇಬಂಡಿ ಉತ್ಸವ ನಡೆಯಲಿದೆ.
ಕಾರ್ಯಕ್ರಮಗಳ ಅಂಗವಾಗಿ ಏ.29 ರಂದು ಸೋಮವಾರ ಸಂಜೆ 5.30 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸದಾನಂದ ಯಂ(ನಿವೃತ್ತ ಕಾರ್ಯದರ್ಶಿ, ಬಾಯಾರು ಎಸ್ ಸಿ ಬೇಂಕ್)ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಪೋಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಗೋಪೀನಾಥ ಶೆಟ್ಟಿ ಉಪಸ್ಥಿತರಿರುವರು. ನಿವೃತ್ತ ಮುಖ್ಯೋಪಾಧ್ಯಾಯ, ಸಾಮಾಜಿಕ ಕಾರ್ಯಕರ್ತ ರವಿನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಏ.26 ರಂದು ಶುಕ್ರವಾರ ಬೆಳಿಗ್ಗೆ ಪ್ರಸಿದ್ಧ ಭಾಗವರತರ ಕೂಡುವಿಕೆಯಿಂದ "ಯಕ್ಷಗಾನಾರ್ಚನೆ" ಹಾಗೂ ರಾತ್ರಿ 7- ರಿಂದ ನಾಟ್ಯ ವಿದ್ಯಾಲಯ ಕುಂಬಳೆ ಇದರ ವಿದ್ಯಾರ್ಥಿಗಳಿಂದ "ನೃತ್ಯ ಸಂಭ್ರಮ" ನಡೆಯಲಿದೆ.ಏ28 ರಂದು ಭಾನುವಾರ ರಾತ್ರಿ ಪಡ್ರೆ ಚಂದ್ರು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇದರ ಸದಸ್ಯರಿಂದ " ಚಕ್ರವ್ಯೂಹ" ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಏ.29 ರಂದು ಸೋಮವಾರ ಓಂ ಶ್ರೀ ಆಟ್ರ್ಸ್ ಸ್ಪೋಟ್ಸ್ ಕ್ಲಬ್ ಸಾದರಪಡಿಸುವ ಸನಾತನ ನಾಟ್ಯಾಲಯ ಮಂಗಳೂರು ಪ್ರಸ್ತುತಪಡಿಸುವ "ನುಡಿನಾದ ನಾಟ್ಯಾಮೃತ, ಪುಣ್ಯಭೂಮಿ ಭಾರತ" ಎಂಬ ಕಾರ್ಯಕ್ರಮ ಆದರ್ಶ ಗೋಖಲೆ ಕಾರ್ಕಳ ಇವರ ನಿರೂಪಣೆಯಲ್ಲಿ ನಡೆಯಲಿದೆ. ಏ.30ರಂದು ಮಂಗಳವಾರ ಸಂಜೆ 5.30ಕ್ಕೆ ಸ್ವರ ಮಾಣಿಕ್ಯ ಬಾಯಾರು ತಂಡದಿಂದ ಭಕ್ತಿ ರಸಮಂಜರಿ ನಡೆಯಲಿದೆ. ರಾತ್ರಿ ಲ. ಕಿಶೋರ್ ಡಿ ಶೆಟ್ಟಿ ಅವರ ಲಕುಮಿ ತಂಡದ ಸದಸ್ಯರಿಂದ "ಮಂಗೆ ಮಲ್ಪೊಡ್ಚಿ" ಎಂಬ ತುಳು ಹಾಸ್ಯ ನಾಟಕ ನಡೆಯಲಿದೆ.