HEALTH TIPS

ಏ.26-28 : ಧರ್ಮ ಕೋಲೋತ್ಸವ, ಸಗ್ರಹ ಮುಖ ಶನೈಶ್ಚರ ಶಾಂತಿ ಮಹಾಯಾಗ


      ಬದಿಯಡ್ಕ: ಪಳ್ಳತ್ತಡ್ಕ ವಾಂತಿಚ್ಚಾಲು ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಎ.26 ರಿಂದ 28 ರ ವರೆಗೆ ಪಂಚ ವರ್ಷಗಳಿಗೊಮ್ಮೆ ನಡೆಯುವ ಶ್ರೀ ದೈವದ ಧರ್ಮ ನೇಮೋತ್ಸವ, ಅಷ್ಟೋತ್ತರ ಪಂಚಶತ ಸೀಯಾಳಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ಸಗ್ರಹ ಮುಖ ಶನೈಶ್ಚರ ಶಾಂತಿ ಮಹಾಯಾಗ, ಸರ್ವಧರ್ಮ ಮಾತೃ ಸಂಗಮ ನಡೆಯಲಿದೆ.
   ಏ.26 ರಂದು ಸಂಜೆ 4 ಗಂಟೆಗೆ ದೀಪ ಪ್ರತಿಷ್ಠೆ, ಶ್ರೀ ಮಂತ್ರಮೂರ್ತಿ ಗುಳಿಗ ಭಂಡಾರ ಇಳಿಯುವುದು, 4.30 ಕ್ಕೆ ವಿಶೇಷ ತಂಬಿಲ ಸೇವೆ, ಸಾಮೂಹಿಕ ಪ್ರಾರ್ಥನೆ, 5 ಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 6.15 ಕ್ಕೆ ಉಗ್ರಾಣ ಮುಹೂರ್ತ, 6.30 ಕ್ಕೆ ಧಾರ್ಮಿಕ ಸಮಾರಂಭ ಉದ್ಘಾಟನೆ, ರಾತ್ರಿ 8 ರಿಂದ ಯಕ್ಷಗಾನ ಬಯಲಾಟ, 10.30 ರಿಂದ ನೃತ್ಯ ವೈಭವ ನಡೆಯಲಿದೆ.
    ಏ.27 ರಂದು ಪ್ರಾತ:ಕಾಲ 6.15 ಕ್ಕೆ ದ್ವಾದಶ ನಾಳಿಕೇರ ಅಷ್ಟದ್ರವ್ಯ ಸಹಿತ ಗಣಪತಿ ಹೋಮ, 7.30 ಕ್ಕೆ ಶ್ರೀ ದೈವಕ್ಕೆ ಸೀಯಾಳಾಭಿಷೇಕ, 8 ಕ್ಕೆ ಭಜನೆ,10 ಕ್ಕೆ ಸಗ್ರಹಮುಖ ಶನೈಶ್ಚರ ಶಾಂತಿ ಮಹಾಯಾಗ, ಮಧ್ಯಾಹ್ನ 12 ಕ್ಕೆ ಮಹಾಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, 1 ಕ್ಕೆ ತುಳುನಾಡ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸನಾತನ ಸಂಸ್ಕøತಿಯ ಉಳಿವಿಗಾಗಿ ಸರ್ವಧರ್ಮ ಮಾತೃ ಸಂಗಮ, ಸಂಜೆ 4 ಕ್ಕೆ ನೃತ್ಯ ವೈವಿಧ್ಯ, ರಾತ್ರಿ 7 ಕ್ಕೆ ಸಮಾರೋಪ ಸಮಾರಂಭ, 8 ಕ್ಕೆ ಕಾರ್ಯಕ್ರಮ ವೈವಿಧ್ಯ ಜರಗಲಿದೆ.
    ಏ.28 ರಂದು ಬೆಳಗ್ಗೆ 6.30 ಕ್ಕೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, 10 ಕ್ಕೆ ಶ್ರೀ ಮಂತ್ರಮೂರ್ತಿ ಗುಳಿಗ ದೈವದ ಕೋಲೋತ್ಸವ, ಮಧ್ಯಾಹ್ನ 12 ಕ್ಕೆ ತುಲಾಭಾರ ಸೇವೆ, 1.30 ಕ್ಕೆ ಶ್ರೀ ದೈವದ ಪ್ರಸಾದ ವಿತರಣೆ, ಸಂಜೆ 5 ಕ್ಕೆ ಶ್ರೀ ದೈವದ ಭಂಡಾರ ಇಳಿಯುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries