ಕಾಸರಗೋಡು: 17ನೇ ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯಲ್ಲಿ ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ಆಹಾರ, ಕುಡಿಯುವ ನೀರು ಪೂರೈಕೆ ನಡೆಸುವ ಮೂಲಕ ಜಿಲ್ಲಾ ಕುಟುಂಬಶ್ರೀ ಮಿಷನ್ ಗಳಿಸಿದ್ದು 27 ಲಕ್ಷ ರೂ. ಆದಾಯ.
ಮಂಜೇಶ್ವರ, ಕಾಸರಗೋಡು, ಉದುಮಾ, ಕಾಞÂ ಂಗಾಡ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರಗಳ 968 ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಚುನಾವಣೆ ದಿನ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ನೆರೆಕೂಟಗಳ ಮುಖಾಂತರ ಆಹಾರ ಪೂರೈಕೆ ನಡೆಸಲಾಗಿತ್ತು.
ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಚುನಾವನೆ ಕರ್ತವ್ಯ ಸಿಬ್ಬಂದಿಗೆ ಬಹುಸುಲಭವಾಗಿ ಆಹಾರ ಪೂರೈಕೆ ಈ ಮೂಲಕ ನಡೆದಿದೆ. ಶುಚಿತ್ವ ಸಹಿತ ಚಟುವಟಿಕೆಗಳೂ ಕುಟುಂಬಶ್ರೀಯ ಮೇಲ್ನೋಟದಲ್ಲಿ ನಡೆದಿದೆ.
ಚುನಾವಣೆ ಸಾಮಾಗ್ರಿಗಳನ್ನು ಸ್ವೀಕರಿಸಲು ಸಿಬ್ಬಂದಿ ಸ್ವೀಕಾರ ಕೇಂದ್ರಗಳಾಗಿದ್ದ ಕಾಸರಗೋಡು ಸರಕಾರಿ ಕಾಲೇಜು ಮತ್ತು ಪಡನ್ನಕ್ಕಾಡ್ ನೆಹರೂ ಕಾಲೇಜಿನ ಹತ್ತು ಸ್ಟಾಲ್ಗಳಿಗೆ ಆಗಮಿಸಿದ್ದ ವೇಳೆ ಕುಡಿಯುವ ನೀರು, ಆಹಾರ ಪೂರೈಸಲಾಗಿತ್ತು. ತದನಂತರ ಏ.22ರಂದು ಸಂಜೆ ಆಯಾ ಮತಗಟ್ಟೆ ಗಳಿಗೆ ಆಗಮಿಸಿದ ಸಿಬ್ಬಂದಿಗೆ ಆಹಾರ, ಕುಡಿಯುವ ನೀರು ಇತ್ಯಾದಿ ಪೂರೈಸಲಾಗಿತ್ತು. ಇದಕ್ಕಾಗಿ 200 ರೂ. ಮೌಲ್ಯದ ಕೂಪನ್ ಸಿಬ್ಬಂದಿಗೆ ವಿತರಿಸಲಾಗಿತ್ತು. ಇದನ್ನು ಬಳಸಿ ಚುನಾವಣೆಯ ದಿನ 5 ಹೊತ್ತಿನ ಆಹಾರ, ಪಾನೀಯ ವ್ಯವಸ್ಥೆ ಒದಗಿಸಲಾಗಿತ್ತು.
ಚುನಾವಣೆ ಸಂಬಂಧ ತರಬೇತಿ ನೀಡಲಾದ ದಿನಗಳಲ್ಲೂ ಕುಟುಂಬಶ್ರೀ ವತಿಯಿಂದ ಆಹಾರ ವ್ಯವಸ್ಥೆ ಒದಗಿಸಲಾಗಿತ್ತು. ಚುನಾವಣೆ ಪ್ರಚಾರ ದೃಷ್ಟಿಯಿಂದ ಕುಟುಂಬಶ್ರೀಯ ಸಂಸ್ಥೆಯಾಗಿರುವ ರಂಗಶ್ರೀ ತಂಡದಿಂದ ಬೀದಿ ನಾಟಕಗಳ ಪ್ರಸ್ತುತಿಯೂ ಜಿಲ್ಲೆಯ ಪ್ರಧಾನ ಕೇಂದ್ರಗಳಲ್ಲಿ ನಡೆಸಲಾಗಿತ್ತು.
(ಸಮರಸ ಚಿತ್ರ ಮಾಹಿತಿ: ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಮತಗಟ್ಟೆ ಕೇಂದ್ರ ಪರಿಸರದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಆಹಾರ ತಯಾರಿ ಕುಟುಂಬಶ್ರೀ ಘಟಕದ ತಮಡ ನಿರ್ವಹಣೆಯ ತರಾತುರಿಯಲ್ಲಿ .)