ಕಾಸರಗೋಡು: ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ಏ.28 ರಿಂದ ಮೇ 5 ರ ವರೆಗೆ 8 ದಿನಗಳ ಯಕ್ಷಗಾನ ನಾಟ್ಯ ಶಿಬಿರವು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಜರಗಲಿದೆ. ಶಿಬಿರವನ್ನು ಕಾಸರಗೋಡು ಅಂಚೆ ಅಧೀಕ್ಷಕ ಕಚೇರಿಯ ಕಚೇರಿ ಸಹಾಯಕ ಬಿ.ವಾಸುದೇವ ನಾವಡ ಮಧೂರು ಉದ್ಘಾಟಿಸುವರು. ಮಧ್ಯಾಹ್ನ 12.15 ಕ್ಕೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ವಹಿಸಲಿರುವರು. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರಸಿದ್ಧ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಶಿಬಿರವನ್ನು ನಡೆಸಿಕೊಡುವರು.
ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ಕಿಶೋರ್ ಕುಮಾರ್ ಕೂಡ್ಲು(9744803074) ಅವರನ್ನು ಸಂಪರ್ಕಿಸಲು ತರಬೇತಿ ಕೇಂದ್ರದ ಪ್ರಕಟನೆಯಲ್ಲಿ ತಿಳಿಸಿದೆ.