ಕಾಸರಗೋಡು: ಹರಿತಕೇರಳಂ ಮಿಷನ್ ವತಿಯಿಂದ ಜಿಲ್ಲೆಯ ಮಕ್ಕಳಿಗಾಗಿ ರಜಾದಿನಗಳ ಶಿಬಿರ ನಡೆಸಲಾಗುವುದು.
ಏ.29,30ರಂದು ಉದುಮಾ ಏರೋಲ್ ಪೆಲೆಸ್ ನಲ್ಲಿ ಈ ಜಿಲ್ಲಾ ಮಟ್ಟದ ಶಿಬಿರ ಜರುಗುವುದು. "ಆರೋಗ್ಯ ಸಂರಕ್ಷಣೆಗೆ ತ್ಯಾಜ್ಯ ರಹಿತ ಪರಿಸರ" ಎಂಬ ಗುರಿಯೊಂದಿಗೆ ತ್ಯಾಜ್ಯ ಪರಿಷ್ಕರಣೆ ಮತ್ತು ಪರಿಸರ ಶುಚೀಕರಣ, ಅಂಟು ರೋಗ ಪ್ರತಿರೋಧ ಚಟುವಟಿಕೆಗಳ ಬಾಲಪಾಠಗಳನ್ನು ಹಸ್ತಾಂತರಿಸುವ, ತ್ಯಾಜ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಗೊಳಿಸಿ, ಪ್ರಕೃತಿ ಸ್ನೇಹಿ ಪರಿಕರಗಳನ್ನು ಗಣನೀಯಪ್ರಮಾಣದಲ್ಲಿ ಬಳಸುವ ಅಭ್ಯಾಸ ಹೆಚ್ಚಿಸುವ ಉದ್ದೇಶದಿಂದ ಈ ಶಿಬಿರ ನಡೆಯಲಿದೆ.
ಹರಿತ ಕೇರಳ ಮಿಷನ್, ಕುಟುಂಬಶ್ರೀ, ಕಿಲ, ಶುಚಿತ್ವ ಮಿಷನ್, ಆರೋಗ್ಯ ಇಲಾಖೆಗಳು ಜಂಟಿಯಾಗಿ ಈ ಶಿಬಿರ ನಡೆಸಲಿವೆ. ಎರಡು ದಿನಗಳ ಶಿಬಿರದಲ್ಲಿ ಪಾಳು ವಸ್ತುಗಳಿಂದ ಕುತೂಹಲ ಮೂಡಿಸುವ ವಸ್ತುಗಳ ನಿರ್ಮಾಣ(ಕಸದಿಂದ ರಸ), ತ್ಯಾಜ್ಯ ಪರಿಷ್ಕರನೆಯ ವಿಧಾನಗಳು, ಹಸುರು ಸಂಹಿತೆಗಳ ಮಾಹಿತಿ, ಮನೆಮನೆ ಸಂದರ್ಶನ, ಆರೋಗ್ಯ ತರಗತಿ, ಸ್ಥಳೀಯ ಮಟ್ಟದ ಪರಿಸರ ಮಲಿನೀಕರಣ ಸಂಬಂಧ ವರದಿಗಾರಿಕೆ, ಅಧಿಕಾರಿಗಳಿಗೆ ಸಲ್ಲಿಸಲು ಮನವಿ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಶಿಬಿರದಲ್ಲಿ ನಡೆಸಲಾಗುವುದು.
ಮುಂದಿನ ಹಂತದ ಶಿಬಿರಗಳು:
ಮುಂದಿನ ಹಂತದಲ್ಲಿ ಮೇ 2ರಿಮದ 9 ವರೆಗೆ ಬ್ಲೋಕ್ ಮಟ್ಟದ ಶಿಬಿರ ನಡೆಸಲಾಗುವುದು. ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ತರಬೇತಿ ಪೂರ್ಣಗೊಳ್ಳುತ್ತಿದ್ದಂತೆ ಪಂಚಾಯತ್ ಮತ್ತು ವಾರ್ಡ್ ಮಟ್ಟದ ಶಿಬಿರಗಳನ್ನು ನಡೆಸಲಾಗುವುದು.