ಕಾಸರಗೋಡು: ಸೂರ್ಲು ಶ್ರೀ ಮಹಿಷಂದಾಯ ಮೂಕಾಂಬಿಕಾ ಗುಳಿಗ ಪರಿವಾರ ದೈವಸ್ಥಾನದಲ್ಲಿ ದೈವಂಕೆಟ್ಟು ಮಹೋತ್ಸವ ಮೇ 2 ಮತ್ತು 3 ರಂದು ನಡೆಯಲಿದೆ.
ಮೇ 2 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹೋಮ, ತಂಬಿಲ, 10 ಕ್ಕೆ ಗುಳಿಗನ ಕೋಲ, ಮಧ್ಯಾಹ್ನ 12 ಕ್ಕೆ ಮಹಿಷಂದಾಯ ದೈವದ ಕೋಲ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6 ಕ್ಕೆ ಪ್ರಾರ್ಥನೆ, 7 ಕ್ಕೆ ದೈವಸ್ಥಾನದಿಂದ ಭಂಡಾರ ಹೊರಡುವುದು, ರಾತ್ರಿ 8.30 ಕ್ಕೆ ಅನ್ನಸಂತರ್ಪಣೆ, 9 ಕ್ಕೆ ಪಂಜುರ್ಲಿ ದೈವದ ಕೋಲ, 10 ಕ್ಕೆ ಮೂಕಾಂಬಿಕಾ ಗುಳಿಗನ ಕೋಲ, 11 ಗಂಟೆಗೆ ಕಲ್ಲುರ್ಟಿ ದೈವದ ಕೋಲ, 11.30 ಕ್ಕೆ ಶ್ರೀ ಮೂಕಾಂಬಿಕಾ ಗುಳಿಗ ಮತ್ತು ಕಲ್ಲುರ್ಟಿ ದೈವದ ಅಗ್ನಿ ಪ್ರವೇಶ ಜರಗಲಿದೆ.
ಮೇ 3 ರಂದು ಬೆಳಗ್ಗೆ 9 ಕ್ಕೆ ಅಣ್ಣಪ್ಪ ದೈವದ ಕೋಲ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, 1.30 ಕ್ಕೆ ಕೊರತಿ ದೈವದ ಕೋಲ, ಆಟಕಾರ್ತಿ ದೈವದ ಕೋಲ, ರಾತ್ರಿ 8 ಕ್ಕೆ ಅನ್ನಸಂತರ್ಪಣೆ ಮತ್ತು 9 ಕ್ಕೆ ಕೊರಗ ತನಿಯ ದೈವದ ಕೋಲ ನಡೆಯಲಿದೆ.