ಸಮರಸ-ಮಹಾ ಭಾರತದ ಕನತಂತ್ರದ ಹೆಜ್ಜೆಗಳು-3 ಲೋಕಸಭಾ ಚುನಾವಣೆಯ ಇತಿಹಾಸ ಹಾಗೂ ನಡೆದು ಬಂದ ಹಾದಿ!!
0
ಏಪ್ರಿಲ್ 07, 2019
(ನಿನ್ನೆಯ ಮುಂದುವರಿದ ಭಾಗ....)
ಮೂರನೇ ಲೋಕಸಭೆ (1962-67)
494 ಸ್ಥಾನಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 361 ಸ್ಥಾನಗಳನ್ನು ಗೆದ್ದುಕೊಂಡಿತು. ಈ ಚುನಾವಣೆಯಲ್ಲಿ ನಾಲ್ಕು ಇತರ ಪಕ್ಷಗಳು ಎರಡು ಅಂಕಿಯ ಸ್ಥಾನಗಳನ್ನು (ಸಿಪಿಐ, ಜನ ಸಂಘ, ಸ್ವತಂತ್ರ ಪಕ್ಷ ಮತ್ತು ಪಿಎಸ್ಪಿ) ಗೆದ್ದವು. ಹಿಂದಿನ ಮತದಾನದಲ್ಲಿ ಕಾಂಗ್ರೆಸ್ಸಿನ ಮತ ಹಂಚಿಕೆಯು ಶೇಕಡ 48ರಿಂದ ಶೇಕಡ 45 ಕ್ಕೆ ಇಳಿಯಿತು. ಮತ್ತೆ ಜವಾಹರಲಾಲ್ ನೆಹರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಆದರೆ 1964ರ ಮೇ ತಿಂಗಳಲ್ಲಿ ಕಾಶ್ಮೀರದಿಂದ ಹಿಂದಿರುಗಿದ ನಂತರ ನೆಹರೂ ಪಾಶ್ರ್ವವಾಯು ಪೀಡಿತರಾಗಿ ಹೃದಯಾಘಾತಕ್ಕೂ ಈಡಾಗಿ 1964ರ ಮೇ 27ರಂದು ಮರಣಿಸಿದರು. ನೆಹರೂರವರ ಮರಣದಿಂದ ನಂತರ ಎರಡು ವಾರಗಳ ಅವಧಿಯವರೆಗೆ ಅನುಭವಿ ಕಾಂಗ್ರೆಸ್ ನಾಯಕ ಗುಲ್ಜಾರಿಲಾಲ್ ನಂದಾ ಅವರನ್ನು ಮಧ್ಯಂತರ ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡಿಕೊಂಡರು.
ತದನಂತರ ಓರ್ವ ಹೊಸ ನಾಯಕರಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕಾಂಗ್ರೆಸ್ ಚುನಾಯಿಸುವವರೆಗೆ ಅವರು ಹಂಗಾಮಿ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಪ್ರಧಾನ ಮಂತ್ರಿಯ ಹುದ್ದೆಗೆ ಶಾಸ್ತ್ರಿಯವರದು ಒಂದು ಅಸಂಭವ ಆಯ್ಕೆ ಎನಿಸಿತ್ತು. ಆದರೆ ಅನಿರೀಕ್ಷಿತವಾಗಿ, 1965ರಲ್ಲಿ ಪಾಕಿಸ್ತಾನದ ವಿರುದ್ಧ ವಿಜಯವನ್ನು ಹೊಂದುವೆಡೆಗೆ ದೇಶವನ್ನು ಮುನ್ನಡೆಸಿದರು. ಆದರೆ ತಾವು ಸಾಧಿಸಿದ ಗೆಲುವಿನ ಪ್ರಯೋಜನಗಳನ್ನು ಶಾಸ್ತ್ರಿಯವರು ಬಹಳ ದಿನ ನೋಡಲಾಗಲಿಲ್ಲ. 19 ತಿಂಗಳುಗಳ ಕಾಲ ಹುದ್ದೆಯಲ್ಲಿದ್ದು, ಶಾಸ್ತ್ರೀಜೀ ನಿಧನರಾದರು. ನಂದಾ ಮತ್ತೊಮ್ಮೆ ಹಂಗಾಮಿ ಪ್ರಧಾನಮಂತ್ರಿಯ ಸ್ಥಾನವನ್ನು ಅಲಂಕರಿಸಿದರು. ಈ ಬಾರಿಯೂ ಅವರದು ಒಂದು ತಿಂಗಳಿಗಿಂತ ಕಡಿಮೆಯಿದ್ದ ಅಧಿಕಾರಾವಧಿಯಾಗಿತ್ತು ಹಾಗೂ ನಂತರ ಇವರ ಉತ್ತರಾಧಿಕಾರಿಯಾಗಿ ನೆಹರೂರವರ ಮಗಳಾದ ಇಂದಿರಾ ಗಾಂಧಿಯವರು 1966 ರಲ್ಲಿ ಅಧಿಕಾರ ವಹಿಸಿಕೊಂಡರು.
ನಾಲ್ಕನೇ ಲೋಕಸಭೆ (1967-70)
1967ರ ಏಪ್ರಿ???ನಲ್ಲಿ, ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು 520 ಸೀಟುಗಳಲ್ಲಿ 283 ಸೀಟುಗಳನ್ನು ಪಡೆದುಕೊಂಡಿರುವ ಮೂಲಕ ಸತತ ನಾಲ್ಕನೇ ಬಾರಿಗೆ ಕಾಂಗ್ರೆಸ್ ಅಧಿಕಾದ ಚುಕ್ಕಾಣಿಯನ್ನೇರಿತು. ಅದುವರೆಗೂ ಸಂಸತ್ತಿನಲ್ಲಿನ ಸ್ಥಾನಗಳ ಪೈಕಿ 73 ಪ್ರತಿಶತಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಎಂದಿಗೂ ಗೆದ್ದಿರದಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಕೆಟ್ಟ ಸುದ್ದಿಯು ಕಾದಿತ್ತು. 1967ರ ಚುನಾವಣೆಗಳ ಫಲಿತಾಂಶಗಳಲ್ಲಿ ಕಾಂಗ್ರೆ???ನ ಆಂತರಿಕ ಬಿಕ್ಕಟ್ಟು ಮುಖಕ್ಕೆ ರಾಚುವಂತಿತ್ತು. ಮೊಟ್ಟಮೊದಲ ಬಾರಿಗೆ ಪಕ್ಷವು ಕೆಳಮನೆಯಲ್ಲಿ ಸರಿಸುಮಾರು 60 ಸ್ಥಾನಗಳನ್ನು ಸೋತಿತು ಹಾಗೂ 283 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಇನ್ನು, ಈ ಚುನಾವಣೆಯಲ್ಲಿ ಸಿ ರಾಜಗೋಪಾಲಾಚರಿಯವರ ಸ್ವತಂತ್ರ ಪಾರ್ಟಿಯು 44 ಸೀಟುಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತಾದರೂ ಈ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ಎರಡನೇ ಬಾರಿಗೆ ಪ್ರಧಾನಿ ಹುದ್ದೇಯನ್ನಲಂಕರಿಸಿದರು.
ಐದನೇ ಲೋಕಸಭೆ (1971-77)
1971ರಲ್ಲಿ ಕಾಂಗ್ರೆಸ್ ಪಕ್ಷವನ್ನು ಒಂದು ಪ್ರಚಂಡ-ಬಹುಮತದ ವಿಜಯದೆಡೆಗೆ ಇಂದಿರಾ ಗಾಂಧಿಯವರು ಮನ್ನಡೆಸಿದರು. "ಗರೀಬಿ ಹಟಾವೊ" (ಬಡತನವನ್ನು ನಿರ್ಮೂಲಗೊಳಿಸಿ) ಎಂಬ ಘೋಷಣೆಯನ್ನು ಆಧಾರವಾಗಿಟ್ಟುಕೊಂಡು ಚುನಾವಣಾ ಪ್ರಚಾರವನ್ನು ನಡೆಸುವ ಮೂಲಕ 352 ಸ್ಥಾನಗಳನ್ನು ಗಳಿಸಿ ಆಕೆ ಸಂಸತ್ತಿಗೆ ಮರಳಿದರು. ಹಿಂದಿನ ಚುನಾವಣೆಯಲ್ಲಿ 283 ಸ್ಥಾನಗಳನ್ನಷ್ಟೇ ಗಳಿಸಿ ಕಳಪೆ ಪ್ರದರ್ಶನವನ್ನು ಮೆರೆದಿದ್ದ ಪಕ್ಷವು, ಸ್ಥಾನದಲ್ಲಿನ ಹೆಚ್ಚಳದ ಮೂಲಕ ಒಂದು ಗಮನಾರ್ಹ ಸುಧಾರಣೆಯನ್ನು ದಾಖಲಿಸಿತ್ತು. ಇದೇ ಸಂದರ್ಭದಲ್ಲಿ ಮೊರಾರ್ಜಿ ದೇಸಾಯಿಯವರು 16 ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಚುನಾಯಣೆಗಳಲ್ಲಿನ ಅಕ್ರಮಗಳ ಆಧಾರದ ಮೇಲೆ 1975ರ ಜೂನ್ 12ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು 1971ರ ಚುನಾವಣೆಯನ್ನು ಅಸಿಂಧುಗೊಳಿಸಿತು. ರಾಜೀನಾಮೆ ನೀಡುವ ಬದಲಿಗೆ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯೊಂದನ್ನು ಘೋಷಿಸಿದರು ಮತ್ತು ವಿರೋಧ ಪಕ್ಷದ ಸಮಸ್ತರನ್ನೂ ಸೆರೆವಾಸಕ್ಕೆ ಕಳಿಸಿದರು. 1977ರಲ್ಲಿ ನಡೆಸಲಾದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನತಾ ಮೋರ್ಚಾ ಎಂದು ಕರೆಯಲ್ಪಟ್ಟ ಪಕ್ಷಗಳ ಒಕ್ಕೂಟವೊಂದರಿಂದ ಇಂದಿರಾ ಗಾಂಧಿಯನ್ನು ಸಂಪೂರ್ಣವಾಗಿ ಸೋಲುಂಡರು. ಒಟ್ಟಿನಲ್ಲಿ 1975ರಲ್ಲಿ ನಡೆದ ತುರ್ತು ಪರಿಸ್ಥಿತಿ ದೇಶದ ರಾಜಕೀಯದಲ್ಲಿ ಭಾರೀ ಮಟ್ಟದ ಪ್ರಭಾವವನ್ನೇ ಬೀರಿತು.
ಆರನೇ ಲೋಕಸಭೆ (1977-79)
ತುರ್ತುಪರಿಸ್ಥಿತಿಯ ಕಾರಣದಿಂದಾಗಿ ಇಂದಿರಾ ಗಾಂಧಿಯವರು ತಮ್ಮ ಜನಪ್ರಿಯತೆಯನ್ನು ಕಳೆದುಕೊಂಡರು ಮತ್ತು ಚುನಾವಣೆಗಳ ಸಂದರ್ಭದಲ್ಲಿ ಅವರು ಇದರ ಬೆಲೆಯನ್ನು ತೆರಬೇಕಾಗಿ ಬಂತು. ಮಾರ್ಚ್ ತಿಂಗಳಲ್ಲಿ ತಾಜಾ ಚುನಾವಣೆಗಳು ನಡೆಯಲಿವೆ ಎಂಬುದಾಗಿ ಜನವರಿ 23ರಂದು ಘೋಷಿಸಿದ ಗಾಂಧಿಯವರು, ಎಲ್ಲಾ ರಾಜಕೀಯ ಸೆರೆಯಾಳುಗಳನ್ನು ಬಿಡುಗಡೆ ಮಾಡಿದರು. ನಾಲ್ಕು ವಿರೋಧಪಕ್ಷಗಳಾದ ಸಂಸ್ಥಾ ಕಾಂಗ್ರೆಸ್, ಜನಸಂಘ, ಭಾರತೀಯ ಲೋಕದಳ ಮತ್ತು ಸಮಾಜವಾದಿ ಪಕ್ಷಗಳು ಒಂದು ಏಕಪಕ್ಷವಾಗಿ ಚುನಾವಣೆಗಳಲ್ಲಿ ಹೋರಾಡಲು ನಿರ್ಧರಿಸಿದವು. ಈ ಒಕ್ಕೂಟಕ್ಕೆ ಜನತಾಪಕ್ಷ ಎಂದು ಹೆಸರಿಸಲಾಯಿತು. ಸ್ವತಂತ್ರ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಚುನಾವಣೆಗಳನ್ನು ಸೋತಿತು ಹಾಗೂ ಚುನಾವಣೆಗಳು ನಡೆಯುವುದಕ್ಕೆ ಎರಡು ತಿಂಗಳುಗಳು ಮುಂಚಿತವಾಗಷ್ಟೇ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಜನತಾಪಕ್ಷದ ನಾಯಕ ಮೊರಾರ್ಜಿ ದೇಸಾಯಿಯವರು 298 ಸ್ಥಾನಗಳನ್ನು ಗೆದ್ದರು. ಕಾಂಗ್ರೆಸ್ ಕೇವಲ 154 ಸ್ಥಾನಗಳನ್ನು ಪಡೆದುಕೊಂಡು ಸೋಲನ್ನನುಭವಿಸಿತು. ಮಾರ್ಚ್ 24ರಂದು ದೇಸಾಯಿಯವರು ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾದರು.