ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದಲ್ಲಿಏ.30ರಂದು ಬೆಳಗ್ಗೆ 10.30ಕ್ಕೆ ಖಾಸಗಿ ವಲಯಗಳಲ್ಲಿ ಬರಿದಾಗಿರುವ ಹುದ್ದೆಗಳ ನೇಮಕಾತಿ ಸಂಬಂಧ ಸಂದರ್ಶನ ನಡೆಯಲಿದೆ.
ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಒಂದು ವರ್ಷ ವೃತ್ತಿ ಅನುಭವ ಹೊಂದಿರುವವರು ಪ್ರಬಂದಕ ಹುದ್ದೆಯ ಸಂದರ್ಶನದಲ್ಲಿ ಹಾಜರಾಗಬಹುದು. ಪ್ಲಸ್-ಟು ಶಿಕ್ಷಣಾರ್ಹತೆ ಪಡೆದವರು ಪ್ರಬಂಧಕ ಟ್ರೈನಿ ಹುದ್ದೆಯ, ಬಿ.ಎಸ್.ಸಿ, ಬಿ.ಇಡಿ. ಪದವಿ ಹೊಂದಿರುವವರು ಸಹಾಯಕ ಶಿಕ್ಷಕ(ವಿ ಜ್ಞಾನ, ಗಣಿತ) ಹುದ್ದೆಯ, ಬಿ.ಎ.,ಬಿ.ಇಡಿ. ಪದವಿ ಪಡೆದವರು ಸಹಾಯಕ ಶಿಕ್ಷಣ(ಸಮಾಜ ವಿ ಜ್ಞಾನ) ಹುದ್ದೆಯ, ಟಿ.ಟಿ.ಸಿ. ಶಿಕ್ಷಣಾರ್ಹತೆ ಪಡೆದವರು ಪ್ರಾಥಮಿಕ ಶಿಕ್ಷಕ ಹುದ್ದೆಯ, ಎಂ.ಎಲ್.ಐ.ಎಸ್. ಅರ್ಹತೆ ಇರುವವರು ಗ್ರಂಥಪಾಲಕ ಹುದ್ದೆಯ, ಬಿ.ಪಿ.ಇ.ಎಡ್. ಅರ್ಹತೆ ಇರುವವರು ದೈಹಿಕ ಶಿಕ್ಷಕ ಹುದ್ದೆಯ ಸಂದರ್ಶನದಲ್ಲಿ ಭಾಗವಹಿಸಬಹುದು. 18ರಿಂದ 25 ವರ್ಷ ಪ್ರಾಯದವರು ಈ ಸಂದರ್ಶನಗಳಲ್ಲಿ ಭಾಗವಹಿಸಬಹುದು.
ಉದ್ಯೋಗ ಶೀಲತಾ ಕೇಂದ್ರದಲ್ಲಿ ಆಜೀವ ನೋಂದಣಿ ಪಡೆದವರು, ಅಲ್ಲದೇ ಇರುವವರು ಸಂದರ್ಶನದಲ್ಲಿ ಭಾಗವಹಿಸಬಹುದು. ನೋಂದಣಿ ನಡೆಸದೇ ಇರುವ ಸಂದರ್ಶನದಲ್ಲಿ ಭಾಗವಹಿಸಲು ಆಸಕ್ತರಾದವರು ಸಂಬಂಧಿತ ದಾಖಲೆ ಪತ್ರಗಳ, ಗುರುತುಚೀಟಿಯ ನಕಲು ಸಹಿತ 250 ರೂ. ಶುಲ್ಕ ಪಾವತಿಸಿ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ತಿಳಿಸಿದರು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 04994-255582.