ಕೊಲಂಬೋ: ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರ ನಡೆದ ಭೀಕರ ಉಗ್ರದಾಳಿಯಲ್ಲಿ ಸಾವನ್ನಪ್ಪಿದವರ ಖಚಿತ ಸಂಖ್ಯೆಯನ್ನು ಆರೋಗ್ಯ ಇಲಾಖೆ ನೀಡಿದ್ದು, ಉಗ್ರ ದಾಳಿಯಲ್ಲಿ ಸತ್ತಿದ್ದು 359 ಅಲ್ಲ ಎಂದು ಹೇಳಿದೆ.
ಐಸಿಸ್ ಉಗ್ರರ ಬಾಂಬ್ ದಾಳಿಯಲ್ಲಿ 359 ಮಂದಿ ಬಲಿಯಾಗಿದ್ದರು ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಸತ್ತಿದ್ದು 253 ಮಂದಿ ಎಂದು ಖಚಿತಪಡಿಸಿದ್ದಾರೆ. ಸತ್ತವರ ಸಂಖ್ಯೆ ಮುನ್ನೂರರ ಗಡಿ ದಾಟಲು ಕಾರಣ ನೀಡಿದ ಅಧಿಕಾರಿಗಳು, ಬಾಂಬ್ ದಾಳಿಯಲ್ಲಿ ಹಲವರ ದೇಹ ಛಿದ್ರವಾಗಿತ್ತು. ಹೀಗಾಗಿ ಎಣಿಕೆಯ ವೇಳೆ ಒಂದೇ ದೇಹವನ್ನು ಎರಡು ಬಾರಿ ಪರಿಗಣಿಸಿದ್ದರಿಂದ ಸಂಖ್ಯೆ ದುಪ್ಪಟ್ಟಾಗಿತ್ತು ಎಂದಿದ್ದಾರೆ.
ಸದ್ಯ ಎಲ್ಲ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಡಿಎನ್?ಎ ಮಾದರಿಯೊಂದಿಗೆ ಪರಿಶೀಲಿಸಲಾಗಿದೆ ಎಂದು ಇದೇ ವೇಳೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವೆಲ್ಲದರ ನಡುವೆ ಗುರುವಾರ ಮತ್ತೆ ಕೊಲಂಬೋದಲ್ಲಿ ಬಾಂಬ್ ಸ್ಫೋಟವಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಪ್ರತಿನಿತ್ಯ ಬಾಂಬ್?? ಸದ್ದು ಕೇಳಿಸುತ್ತಿರುವ ಪರಿಣಾಮ ದ್ವೀಪರಾಷ್ಟ್ರದಲ್ಲಿ ಭಯದ ವಾತಾವರಣ ಮುಂದುವರೆದಿದೆ. ಅಂತೆಯೇ ಶ್ರೀಲಂಕಾದಾಂದ್ಯತ ತುರ್ತು ಪರಿಸ್ಥಿತಿ ಮುಂದುರೆದಿದೆ ಎನ್ನಲಾಗಿದೆ.
ಕಳೆದ ಈಸ್ಚರ್ ಸಂಡೆಯಂದು ಶ್ರೀಲಂಕಾದ ಒಟ್ಟು 9 ಕಡೆಗಳಲ್ಲಿ ಓರ್ವ ಮಹಿಳಾ ಬಾಂಬರ್ ಸೇರಿದಂತೆ ಒಟ್ಟು 9 ಮಂದಿ ಆತ್ಮಹತ್ಯಾ ದಾಳಿಕೋರರು 4 ಚರ್ಚ್ ಹಾಗೂ 4 ಹೊಟೆಲ್ ಗಳ ಮೇಲೆ ದಾಳಿ ಮಾಡಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಈ ದಾಳಿಯ ನೇತೃತ್ವ ವಹಿಸಿಕೊಂಡಿತ್ತು. ಸ್ಥಳೀಯ ಉಗ್ರ ಸಂಘಟನೆಯೊಂದಿಗೆ ಸೇರಿ ಈ ಭೀಕರ ಕೃತ್ಯ ವೆಸಗಲಾಗಿತ್ತು.