ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ರಕ್ಷಣಾ ಮಧ್ಯವರ್ತಿ ಎಂದು ಆರೋಪಿಸಿ ಬಂಧಿಸಲಾಗಿರುವ ಸುಶೇನ್ ಮೊಹಾನ್ ಗುಪ್ತಾ ಜಾಮೀನು ಅರ್ಜಿಗೆ ಜಾರಿ ನಿರ್ದೇಶನಾಲಯ ವಿರೋಧ ವ್ಯಕ್ತಪಡಿಸಿದ್ದು, ಆತನಂತೆ ಕ್ರಿಮಿನಲ್ ಹಿನ್ನೆಲೆಯ ಸುಮಾರು 36 ಉದ್ಯಮಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದೆ.
ವಿಜಯ್ ಮಲ್ಯ,ನೀರವ್ ಮೋದಿ ಸೇರಿದಂತೆ 36 ಉದ್ಯಮಿಗಲು ಇತ್ತೀಚಿಗೆ ದೇಶದಿಂದ ಪರಾರಿಯಾಗಿದ್ದಾರೆ ಎಂದು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿಗೆ ಇಡಿ ಹೇಳಿದೆ.
ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಸಂಡೇಸಾರ ಸಹೋದರರು ದೇಶವನ್ನು ತೊರೆದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇಂತಹ 36 ಉದ್ಯಮಿಗಲು ದೇಶದಿಂದ ಕಾಲ್ಕಿತ್ತಿದ್ದಾರೆ ಎಂದು ತನಿಖಾ ಸಂಸ್ಥೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಡಿಪಿ ಸಿಂಗ್ ಮತ್ತು ಎನ್ ಕೆ ಮತ್ತಾ ಸುಶೇನ್ ಹೇಳಿಕೆಗೆ ಪ್ರತಿವಾದ ಮಂಡಿಸಿದ್ದಾರೆ.
ತನಿಖೆ ನಿರ್ಣಾಯಕ ಹಂತದಲ್ಲಿದೆ ಸುಶೇನ್ ಡೈರಿಯಲ್ಲಿ ಉಲ್ಲೇಖಿಸಲಾಗಿದ್ದ ಆರ್ ಜಿ ಎಂಬುದು ಏನ್ನು ಎಂಬುದನ್ನು ಕಂಡುಹಿಡಿಯಲು ತನಿಖಾ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ವಿಚಾರಣೆ ವೇಳೆಯಲ್ಲಿ ಹೇಳಿದ ಇಡಿ ವಕೀಲ ಸಂವೇದನಾ ವರ್ಮಾ ಈ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಗುಪ್ತಾ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಗುಪ್ತಾ ಜಾಮೀನು ಅರ್ಜಿಯ ವಿಚಾರಣೆಯ ತೀರ್ಪನ್ನು ಏಪ್ರಿಲ್ 20ಕ್ಕೆ ನ್ಯಾಯಾಲಯ ಕಾಯ್ದಿರಿಸಿದೆ.
ತನಿಖಾ ಸಂಸ್ಥೆ ಈಗಾಗಲೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ತನ್ನಗೆ ಜಾಮೀನು ನೀಡಬೇಕೆಂದು ಗುಪ್ತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಗುಪ್ತಾ ಅವರನ್ನು ಇಡಿ ಬಂಧಿಸಿತ್ತು.