ನವದೆಹಲಿ: ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 2.96ರಷ್ಟು ಕುಸಿದಿದ್ದು, ಒಟ್ಟು 2,91,806 ವಾಹನಗಳನ್ನು ಮಾರಾಟ ಮಾಡಲಾಗಿದೆ.
2018 ಮಾರ್ಚ್ ತಿಂಗಳಲ್ಲಿ 3,00,722 ವಾಹನಗಳು ಮಾರಾಟವಾಗಿದ್ದವು. 2018ರ ಮಾರ್ಚ್ ನಲ್ಲಿ ಒಟ್ಟು 1.91 ದೇಶೀಯ ಮಾರುಕಟ್ಟೆಯಲ್ಲಿ ಕಾರು ಮಾರಾಟವಾಗಿತ್ತು. ಆದರೆ ಈ ವರ್ಷ 1.77 ಲಕ್ಷ ಕಾರು ಮಾರಾಟವಾಗಿ ಶೇಕಡಾ 6.87ರಷ್ಟು ಕುಸಿತ ಕಂಡಿದೆ ಎಂದು ಕಳೆದ ಸೋಮವಾರ ಭಾರತೀಯ ವಾಹನ ಉತ್ಪಾದಕರ ಸೊಸೈಟಿ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿದೆ.
ವಾಣಿಜ್ಯ ವಾಹನಗಳ ಮಾರಾಟ ಶೇಕಡಾ 0.28ರಷ್ಟು ಬೆಳವಣಿಗೆ ಕಂಡಿದೆ. 2019 ಮಾರ್ಚ್ ತಿಂಗಳಲ್ಲಿ ಒಟ್ಟು 1,09,030 ವಾಹನ ಮಾರಾಟವಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1,08,730 ವಾಹನಗಳು ಮಾರಾಟವಾಗಿದ್ದವು. ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾರಾಟ ಕೂಡ ಶೇಕಡಾ 8.54ರಷ್ಟು ಮತ್ತು 17.31ರಷ್ಟು ಕ್ರಮವಾಗಿ ಕುಸಿದಿದೆ.