HEALTH TIPS

40 ದಿನದಲ್ಲೇ ಅತೀ ಉದ್ದದ ಸೇತುವೆ ನಿರ್ಮಾಣ: ಭಾರತೀಯ ಯೋಧರಿಂದ ದಾಖಲೆ!

ನವದೆಹಲಿ: ಸಿಂಧೂ ನದಿಯ ಲೇಹ್ ನಲ್ಲಿ ಬರೋಬ್ಬರಿ 260 ಅಡಿ ಉದ್ದದ ಕೇಬಲ್ ಸೇತುವೆ ನಿರ್ಮಾಣ ಮಾಡಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ. ಕೇವಲ 40 ದಿನಗಳಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಮೈತ್ರಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ. ಇದರ ನಿರ್ಮಾಣಕ್ಕಾಗಿ 500 ಟನ್ ಗಳಷ್ಟು ನಿರ್ಮಾಣ ಸಾಮಗ್ರಿ ಬಳಕೆ ಮಾಡಲಾಗಿದೆ. ಇದು ಭಾರತೀಯ ಯೋಧರಿಂದ ನಿರ್ಮಾಣವಾಗಿರುವ ವೈಯಕ್ತಿಕ ದಾಖಲೆಯಾಗಿದೆ. ಭಾರತೀಯ ಯೋಧರ ಈ ದಾಖಲೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕಡಿಮೆ ದಿನಗಳಲ್ಲಿ ಸೇತುವೆ ನಿರ್ಮಾಣವಾಗಿರುವುದಕ್ಕಾಗಿ ಸ್ಥಳೀಯರು ಕೂಡ ಶಬ್ಬಾಸ್ ಗಿರಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries