ಕಾಸರಗೋಡು: ಜಿಲ್ಲೆಯಲ್ಲಿ ಕರ್ನಾಟಕದ ಗಡಿಪ್ರದೇಶಗಳಲ್ಲಿ ನೆಲೆಗೊಂಡಿರುವ 41 ಮತಗಟ್ಟೆಳಿವೆ. ಈ ಬೂತ್‍ಗಳಲ್ಲಿ ಒಟ್ಟು 43,689 ಮತದಾರರಿದ್ದಾರೆ. ಅತ್ಯಧಿಕ ಮತದಾರರಿರುವ ಗಡಿ ಮತಗಟ್ಟೆ ಮಂಜೇಶ್ವರದ ಬಾಡೂರು ಗ್ರಾಮದ ಮಂಡಲ್ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ 136ನೇ ಬೂತ್ ಆಗಿದೆ. ಇಲ್ಲಿ 1317 ಮತದಾರರಿದ್ದಾರೆ. ಅತಿ ಕಡಿಮೆ ಮತದಾರರಿರುವ ಮತಗಟ್ಟೆ ದೇಲಂಪಾಡಿ ಗ್ರಾಮಕಚೇರಿಯ 64ನೇ ನಂಬ್ರ ಮತಗಟ್ಟೆ ಆಗಿದೆ. ಇಲ್ಲಿ 610 ಮತದಾರರಿದ್ದಾರೆ.
ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಡಿ ಹೊಂದಿರುವ ಮತಗಟ್ಟೆಗಳು ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿದೆ. ಇಲ್ಲಿ 19 ಗಡಿ ಬೂತ್ ಗಳಿವೆ. ಕಾಸರಗೋಡಿನಲ್ಲಿ 6 ಮತಗಟ್ಟೆಗಳು, ಉದುಮಾದಲ್ಲಿ 8, ಕಾಞÂಂಗಾಡಿನಲ್ಲಿ 4, ತ್ರಿಕರಿಪುರದಲ್ಲಿ 4 ಬೂತ್ ಗಳೂ ಗಡಿಯಲ್ಲಿವೆ. ವರ್ಕಾಡಿ, ದೇಲಂಪಾಡಿ ಗ್ರಾಮಪಂಚಾಯತುಗಳಲ್ಲಿ ಅತ್ಯಧಿಕ ಗಡಿ ಬೂತ್ ಗಳಿವೆ. ತಲಾ 6 ಮತಗಟ್ಟೆಗಳು ಈ ಗ್ರಾಮಪಂಚಾಯತುಗಳಲ್ಲಿವೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 13 ಗಡಿ ಮತಗಟ್ಟೆಗಳು, ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಡಿ ಬೂತ್ ಗಳು, ಬದಿಯಡ್ಕ ಠಾಣೆಯಲ್ಲಿ 5, ಚಿತ್ತಾರಿಕ್ಕಲ್ ನಲ್ಲಿ 4, ಕುಂಬಳೆಯಲ್ಲಿ ಒಂದು, ಬೇಡಗಂ, ರಾಜಪುರಂ, ವೆಳ್ಳರಿಕುಂಡ್ ನಲ್ಲಿ ತಲಾ 2 ಗಡಿ ಮತಗಟ್ಟೆಗಳಿವೆ.