ನವದೆಹಲಿ:ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮನೇಕಾ ಗಾಂಧಿ 48 ಗಂಟೆಗಳ ಕಾಲ ಹಾಗೂ ಎಸ್ಪಿ ಮುಖಂಡ ಅಜಂಖಾನ್ 72 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ನಿಮಗೆ ಕೆಲಸ ಬೇಕಿದ್ದರೆ ನನಗೆ ಮತ ನೀಡಿ ಎಂದು ಮುಸ್ಲಿಮ್ ಮತದಾರರಿಗೆ ಮನೇಕಾ ಗಾಂಧಿ ತಾಕೀತು ಮಾಡಿದ್ದರೆ, ಉತ್ತರ ಪ್ರದೇಶದ ರಾಂಪುರದ ಬಿಜೆಪಿ ಅಭ್ಯರ್ಥಿ ಜಯಪ್ರಧಾ ವಿರುದ್ಧ ಅಜಂಖಾನ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಜಯಪ್ರದ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು.
ಅಜಂಖಾನ್ ಅವರ ಈ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಮಹಿಳೆಯರ ಚಾರಿತ್ರ್ಯವಧೆ ಮಾಡುವಂತಹ ಹೇಳಿಕೆ ನೀಡಿದ ಅಜಂಖಾನ್ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು.
ಇದಕ್ಕೂ ಮುನ್ನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 72 ಗಂಟೆ , ಮಾಯಾವತಿ 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಬರ್ಂಧಿಸಿತ್ತು.