ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಸಮಾಪ್ತಿಗೊಂಡ ನಂತರ ಮುಂದಿನ 48 ತಾಸುಗಳ ಕಾಲ ಈ ಕೆಳಗೆ ತಿಳಿಸಲಾದ ನಿಯಮಾವಳಿಗಳನ್ನು ಪ್ರಕಾರ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಪಾಲಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವಿಧಾನಸಭೆ ಕ್ಷೇತ್ರ ಮಟ್ಟದ ಮತದಾತರಲ್ಲದ , ಅಭ್ಯರ್ಥಿಗಳ ಪ್ರಚಾರ ಸಂಬಂಧ ಬಂದಿರುವ ಬಾಹ್ಯ ವ್ಯಕ್ತಿಗಳು ಯಾವ ಕಾರಣಕ್ಕೂ ಈ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಇರಬಾರದು. ಇಂಥಾ ವ್ಯಕ್ತಿಗಳು ಕ್ಷೇತ್ರದಲ್ಲಿ ಮತ್ತೂ ಉಳಿದುಕೊಂಡಲ್ಲಿ ಈ ಬಗ್ಗೆ ಅಭ್ಯರ್ಥಿಗಳು, ಏಜೆಂಟರು, ರಾಜಕೀಯ ಪಕ್ಷಗಳ ಗಮನಕ್ಕೆ ತರಬೇಕು. ಈ ಬಗ್ಗೆ ಪೊಲೀಸರಿಗೂ ಖಚಿತತೆ ಮೂಡಿಸಬೇಕು. ಈ ಕುರಿತು ಜನತೆಗೆ ಜಾಗೃತಿ ಮೂಡಿಸಿ, ಆರೋಪಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮಕೈಗೊಳ್ಳಬೇಕು. ಕೈಗೊಂಡ ಕ್ರಮಗಳ ಬಗ್ಗೆ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಬೇಕು.
ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಬೂತ್ ಗಳು, 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ಸಾಮಾಗ್ರಿಗಳ ಸ್ಥಾಪನೆ ನಡೆಸಕೂಡದು, ಹೊತ್ತಗೆ ನೋಟೀಸು ಇತ್ಯಾದಿಗಳ ವಿತರಣೆ ಮಾಡಬಾರದು. ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತದಾನನನ್ನು ಮತಗಟ್ಟೆಗೆ ಕರೆತರಲು ವಾಹನ ಸೌಲಭ್ಯ ಏರ್ಪಡಿಸಬಾರದು. ಚುನಾವಣೆ ದಿನ ಅಬ್ಯರ್ಥಿಗಳಿಗೆ, ಪೋಲಿಂಗ್ ಏಜೆಂಟರಿಗೆ, ಪಕ್ಷದ ಕಾರ್ಯಕರ್ತರಿಗೆ ಬಳಸುವ ಕನಿಷ್ಠ 9 ವಾಹನಗಳು ಜಿಲ್ಲಾ ಚುನವಣೆ ಅಧಿಕಾರಿಯ ಪ್ರತ್ಯೇಕ ಆದೇಶ ಪಡೆದಿರಬೇಕು. ಅನುಮತಿ ಪಡೆಯದ ವಾಹನ ಬಳಸುವ ಯತ್ನ ನಡೆಸಿದರೆ ನಿಯಂತ್ರಣ ಕೊಠಡಿಯ ದೂರವಾಣಿ ನಂಬ್ರ 1950ಕ್ಕೆ ಕರೆಮಾಡಬೇಕು.
ಈ ಮೇಲೆ ತಿಳಿಸಿದ ಮಾದರಿ ನೀತಿಸಂಹಿತೆ ಉಲ್ಲಂಘನೆ ನಡೆಸಿದಲ್ಲಿ ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿರುವರು.